ಸಂಬೀತ್ ಪಾತ್ರ ಅವರಿಂದ ಪೋಟೋ ಬಿಡುಗಡೆಯ ಚಿತ್ರ 
ರಾಜಕೀಯ

ಚೀನಾದಲ್ಲಿ ಕಳಂಕಿತ ಉದ್ಯಮಿ ವಿಜಯ್ ಈಶ್ವರನ್ , ಸಿದ್ದರಾಮಯ್ಯ ಭೇಟಿ- ಸಂಬೀತ್ ಪಾತ್ರ ಆರೋಪ

2013 ರಲ್ಲಿ ಸಿದ್ದರಾಮಯ್ಯ ಚೀನಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಳಂಕಿತ ಉದ್ಯಮಿ ವಿಜಯ್ ಈಶ್ವರನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಹಿಂದಿನ ಉದ್ದೇಶ ಏನಿತ್ತು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಆರೋಪಿಸಿದ್ದಾರೆ.

ಬೆಂಗಳೂರು : 2013 ರಲ್ಲಿ ಸಿದ್ದರಾಮಯ್ಯ ಚೀನಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಳಂಕಿತ ಉದ್ಯಮಿ ವಿಜಯ್ ಈಶ್ವರನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಹಿಂದಿನ ಉದ್ದೇಶ  ಏನಿತ್ತು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಆರೋಪಿಸಿದ್ದಾರೆ.

ಸಿದ್ದರಾಮಯ್ಯ , ವಿಜಯ್ ಈಶ್ವರನ್ ಜೊತೆಗಿರುವ  ಪೋಟೋವೊಂದನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಸಂಬೀತ್ ಪಾತ್ರ, ವಿಜಯ್ ಈಶ್ವರನ್  ದೇಶದಿಂದ ತಲೆ ಮರೆಸಿಕೊಂಡಿದ್ದಾನೆ .ಅವರೊಂದಿಗೆ ಮತ್ತೊಬ್ಬ ಕಳಂಕಿತ ಉದ್ಯಮಿಯಿದ್ದು, ಅವರಿಬ್ಬರು ದೇಶಭ್ರಷ್ಟ ಎಂದು ಪರಿಗಣಿಸಲಾಗಿದೆ . ಅವರನ್ನು ಏಕೆ ಸಿದ್ದರಾಮಯ್ಯ ಭೇಟಿ ಮಾಡಿದ್ದರು ಎಂದು ಪ್ರಶ್ನಿಸಿದರು.

ಈ ಸಂಬಂಧ ಈ ತಿಂಗಳ 2 ರಂದು ದೂರು ದಾಖಲಿಸಲಾಗಿದೆ. ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ತೊಡಗಿರುವುದು ಇದರಿಂದ ಬೆಳಕಿಗೆ ಬರಲಿದೆ ಎಂದು ಸಂಬೀತ್ ಪಾತ್ರ ಹೇಳಿದ್ದಾರೆ.

 ಬಿಜೆಪಿಯ ಈ ಆರೋಪಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಜಯ್ ಈಶ್ವರನ್ ಯಾರು ಅಂತಾನೇ ಗೊತ್ತಿಲ್ಲ ಎಂದು ಹೇಳಿದರು.




Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!