ರಸ್ತೆ ಬದಿ ಹೋಟೆಲ್ ನಲ್ಲಿ ನಟ ಸುದೀಪ್ 
ರಾಜಕೀಯ

ಸೋಮಶೇಖರ ರೆಡ್ಡಿ ಪರ ಪ್ರಚಾರ: ರಸ್ತೆ ಬದಿ ಹೋಟೆಲ್ ನಲ್ಲಿ ಚಿತ್ರಾನ್ನ ತಿಂದು, ಟೀ ಕುಡಿದ ಕಿಚ್ಚ!

ರಾಧಾ ಎನ್ನುವ ಬಡ ಮಹಿಳೆಯ ಚಪ್ಪರದ ಹೊಟೇಲಿನಲ್ಲಿ ಸುದೀಪ್ ಚಿತ್ರಾನ್ ತಿಂದು, ಟೀ ಕುಡಿದರು.ತಮ್ಮ ಹೊಟೆಲ್ ಗೆ ಬಂದ ನಟ ಸುದೀಪ್ ನನ್ನು ಕಂಡು ಆಕೆ ಅಚ್ಚರಿ ಪಟ್ಟರು...

ಬಳ್ಳಾರಿ: ಮೇ 12 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕಾಗಿ ಕಿಚ್ಚ ಸುದೀಪ್ ಬಳ್ಳಾರಿಯಲ್ಲಿ ಸೋಮಶೇಖರ ರೆಡ್ಡಿ ಪರ ಪ್ರಚಾರ ನಡೆಸಿದರು, 
ನಟ ಸುದೀಪ್ ಮಾತ್ರ ಅತ್ಯಂತ ಸರಳ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ರೋಡ್ ಬದಿಯಲ್ಲಿರುವ ಹೋಟೆಲ್ ನಲ್ಲಿ ತಿಂಡಿ ಸವಿದು, ಟೀ ಕುಡಿದು ಸುದೀಪ್ ಸರಳತೆ ಮೆರೆದಿದ್ದಾರೆ.
ಬಳ್ಳಾರಿಯಲ್ಲಿ ಸೋಮಶೇಖರ್ ರೆಡ್ಡಿ ಪರ ಪ್ರಚಾರ ನಡೆಸಿ ರೋಡ್ ಶೋ ನಂತರ ಮೊಳಕಾಲ್ಮೂರು ಗೆ ತೆರಳುವ ಮುನ್ಮ ಆಂಧ್ರ ಗಡಿಭಾಗದ ಒಬಳಾಪುರಂ ಬಳಿಯ ರೋಡ್ ಬದಿಯಲ್ಲಿರುವ ಹೊಟೇಲ್‍ನಲ್ಲಿ ತಿಂಡಿ ತಿಂದು ಟೀ ಕುಡಿದರು.
ರಾಧಾ ಎನ್ನುವ ಬಡ ಮಹಿಳೆಯ ಚಪ್ಪರದ ಹೊಟೇಲಿನಲ್ಲಿ ಸುದೀಪ್ ಚಿತ್ರಾನ್ ತಿಂದು, ಟೀ ಕುಡಿದರು.ತಮ್ಮ ಹೊಟೆಲ್ ಗೆ ಬಂದ  ನಟ ಸುದೀಪ್ ನನ್ನು ಕಂಡು ಆಕೆ ಅಚ್ಚರಿ ಪಟ್ಟರು. ಈ ವೇಳೆ ಸುದೀಪ್  10 ಸಾವಿರ ರೂಪಾಯಿ ಹಣ ನೀಡಿದ್ದಾರೆ. ಈ ವೇಳೆ ಮಹಿಳೆ ಹಣ ಪಡೆಯಲು ನಿರಾಕರಿಸಿದಾಗ ಒತ್ತಾಯಪೂರ್ವಕವಾಗಿ ಸುದೀಪ್, ಈ ಹಣದಲ್ಲಿ ಮಕ್ಕಳಿಗೆ ಎನಾದರೂ ಗಿಫ್ಟ್ ತಗೆದುಕೊಳ್ಳಿ ಎಂದು ಹೇಳಿದರು.
ಹೋಟೆಲ್ ಮಾಲಕಿ ರಾಧಾ ಅವರು 2 ಸಾವಿರ ರೂ. ಸಾಕು ಎಂದರೂ ಸುದೀಪ್ 10 ಸಾವಿರ ರೂ. ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್, ಚುನಾವಣಾ ಪ್ರಚಾರದ ದೃಷ್ಟಿಯಿಂದ ನಾನು ಕೊಟ್ಟಿಲ್ಲ. ಪ್ರೀತಿಯಿಂದ ನಾನು ಕೊಟ್ಟದ್ದೇನೆ ಅಷ್ಟೇ ಎಂದರು. ಈ ವೇಳೆ ಮ್ಯಾನೇಜರ್  ಕಾರ್ ನಲ್ಲಿದ್ದ ಮಗ್ ತಂದು ಟೀ ಕೊಟ್ಟಿದ್ದಾರೆ, ಆದರೆ ಅದನ್ನು ಕುಡಿಯದೇ ಪೇಪರ್ ಕಪ್‍ನಲೇ ಟೀ ಕುಡಿದು ಸರಳತೆ ಮೆರೆದರು.
ಈ ವೇಳೆ ಮೊಳಕಾಲ್ಮೂರಿಗೆ ತೆರಳುತ್ತಿದ್ದ ವಿದ್ಯುನ್ಮಾನ ಮಾಧ್ಯಮದವರು ಹೊಟೆಲ್ ನಲ್ಲಿ ತಿಂಡಿ ತಿಂದ ಬಗ್ಗೆ ಸೌಂಡ್ ಬೈಟ್ ನೀಡುವಂತೆ ಕೇಳಿದ್ದಾರೆ, ಆದರೆ ಅದಕ್ಕೆ ನಿರಾಕರಿಸಿದ ಸುದೀಪ್, ನಾನು ನನ್ನ ಸ್ನೇಹಿತನ ಪರ ಪ್ರಚಾರ ಮಾಡಲು ಬಂದಿದ್ದೇನೆ. ಈ ವಿಷಯವನ್ನೆಲ್ಲಾ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು ನನಗೆ ಇಷ್ಟವಿಲ್ಲ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ. ಯಾವುದೇ ಒಂದ ಪಕ್ಷದ ಪರವಾಗಿ ಸುದೀಪ್ ಪ್ರಚಾರ ನಡೆಸುತ್ತಿಲ್ಲ, ತಮ್ಮ ಸ್ನೇಹಿತರ ಪರ ಪ್ರಚಾರದಲ್ಲಿ ಭಾಗವಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT