ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಬೆಂಗಳೂರು; ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷವನ್ನು ಕರ್ನಾಟಕ ಜನತೆ ತಿರಸ್ಕರಿಸುತ್ತಾರೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಬುಧವಾರ ಹೇಳಿದ್ದಾರೆ.
ಬಸವನಗುಡಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿರುವ ರಾಹುಲ್ ಗಾಂಧಿಯವರು, ದಲಿತ ಮೇಲಿನ ದೌರ್ಜನ್ಯ ಕುರಿತು ಪ್ರಧಾನಮಂತ್ರಿಗಳ ಮೌನ ಕುರಿತು ವಾಗ್ದಾಳಿ ನಡೆಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಪ್ರಧಾನಿ ಮೋದಿಯವರು ಎಸ್'ಸಿ/ಎಸ್'ಟಿ ಸಮುದಾಯದ ಜನರ ಮೇಲೆ ದಾಳಿ ನಡೆದಾಗ ಮೌನವಾಗಿರುತ್ತಾರೆ. ರಾಜಸ್ತಾನ ಮತ್ತು ಮಧ್ಯಪ್ರದೇಶದಂತೆಯೇ ಕರ್ನಾಟಕದ ಜನತೆ ಕೂಡ ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷವನ್ನು ಶೀಘ್ರದಲ್ಲಿಯೇ ಕಿತ್ತೊಗೆಯಲಿದ್ದಾರೆ.
ಬಿಜೆಪಿ ಸಂವಿಧಾನ ಬದಲಿಸಲು ಕಾಂಗ್ರೆಸ್ ಬಿಡುವುದಿಲ್ಲ. ಪ್ರಧಾನಮಂತ್ರಿಗಳ ಸಂಪುಟದಲ್ಲಿರುವ ಸಚಿವರೊಬ್ಬರು ಸಂವಿಧಾನ ಬದಲಿಸುವುದಾಗಿ ಹೇಳಿದ್ದಾರೆ. ಏನೇ ಆದರೂ ಸಂವಿಧಾನವನ್ನು ಬದಲಿಸಲು ನಾವು ಬಿಡುವುದಿಲ್ಲ. ನೀವು ಕಾಂಗ್ರೆಸ್'ನ್ನು ನೋಡಿರಬಹುದು. ನಾವು ಪ್ರಧಾನಮಂತ್ರಿಗಳನ್ನು ವಿರೋಧಿಸುತ್ತೇವೆ. ಅವರ ವಿರುದ್ಧ ಮಾತನಾಡುತ್ತೇವೆ. ಆದರೆ, ಪ್ರಧಾನಮಂತ್ರಿಗಳ ಸ್ಥಾನಕ್ಕೆ ಗೌರವಿಸುತ್ತೇವೆ.
ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಮಾತನಾಡಿದರೆ, ತಮ್ಮ ಪಕ್ಷಕ್ಕೆ ಲಾಭವಾಗಲಿಗೆ ಎಂದು ಮೋದಿ ತಿಳಿದರಬಹುದು. ಆದರೆ, ಪ್ರಧಾನಮಂತ್ರಿಗಳ ಸ್ಥಾನಕ್ಕೆ ಅದು ಯೋಗ್ಯವಲ್ಲ. ಇದನ್ನು ಅವರು ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics