ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಆರ್'ಎಸ್ಎಸ್-ಬಿಜೆಪಿ ಮುಸ್ಲಿಂ ಬ್ರದರ್'ಹುಡ್ ಇದ್ದಂತೆ: ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳವಾರ ಆರ್'ಎಸ್ಎಸ್-ಬಿಜೆಪಿ ಮತ್ತು ಮುಸ್ಲಿಂ ಬ್ರದರ್'ಹುಡ್ ಇದ್ದಂತೆ (ಈಜಿಪ್ಟ್'ನಲ್ಲಿ ಸ್ಥಾಪಿತವಾಗಿರುವ ಸುನ್ನಿ ಇಸ್ಲಾಮಿಕ್ ಮೂಲಭೂತವಾದಿ) ನಡುವೆ ಹೋಲಿಕೆ ಮಾಡಿ ವ್ಯಂಗ್ಯವಾಡಿದ್ದಾರೆ...

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
Manjula VN
Updated On : 9 May 2018, 10:01 am
ಬೆಂಗಳೂರು; ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳವಾರ ಆರ್'ಎಸ್ಎಸ್-ಬಿಜೆಪಿ ಮತ್ತು ಮುಸ್ಲಿಂ ಬ್ರದರ್'ಹುಡ್ ಇದ್ದಂತೆ (ಈಜಿಪ್ಟ್'ನಲ್ಲಿ ಸ್ಥಾಪಿತವಾಗಿರುವ ಸುನ್ನಿ ಇಸ್ಲಾಮಿಕ್ ಮೂಲಭೂತವಾದಿ) ನಡುವೆ ಹೋಲಿಕೆ ಮಾಡಿ ವ್ಯಂಗ್ಯವಾಡಿದ್ದಾರೆ. 
ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಅಧಿಕಾರಕ ಬಂದ ಕೂಡಲೇ ಎಲ್ಲಾ ಸಂಸ್ಥೆಗಳನ್ನು ತನ್ನ ಅಧೀನಕ್ಕೆ ಪಡೆದುಕೊಳ್ಳಲು ಯತ್ನ ನಡೆಸುತ್ತಿದೆ. ಈಜಿಪ್ಟ್, ಪಾಕಿಸ್ತಾನ ಮತ್ತು ತುನಿಶಿಯಾದಲ್ಲಿ ಮುಸ್ಲಿಂ ಬ್ರದರ್'ಹುಡ್ ಗಳಂತೆ ಭಾರತದಲ್ಲಿ ಬಿಜೆಪಿ-ಆರ್"ಎಸ್ಎಸ್ ನಡೆದುಕೊಳ್ಳುತ್ತಿದೆ. ತುನಿಶಿಯಾ ಪ್ರಜಾಪ್ರಭುತ್ವ ನಾಶ ಮಾಡಲು ಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ. 
ಒಮ್ಮೆ ಅಧಿಕಾರಕ್ಕೆ ಬಂದರೆ ಮತ್ತೆಂದೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದು ಬಿಜೆಪಿ ಹಾಗೂ ಆರ್'ಎಸ್ಎಸ್ ಗೊತ್ತಾಗಿದ್ದು, ಹೀಗಾಗಿ ಎಲ್ಲಾ ಸಂಸ್ಥೆಗಳನ್ನು ತನ್ನ ಅಧೀನಕ್ಕೆ ಪಡೆದುಕೊಳ್ಳಲು ಬಯಸುತ್ತಿದೆ. ಅವರಿಗೆ ಪ್ರಜಾಪ್ರಭುತ್ವದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 

Advertisement

Advertisement

ಈ ಬಾರಿಯ ವಿಧಾನಸಭಾ ಚುನಾವಣೆ ಜಾತ್ಯತೀತ ಮತ್ತು ಕೋಮುವಾದಿ ಎಂಬ ಎರಡು ಸಿದ್ಧಾಂತಗಳೊಂದಿಗೆ ಮುನ್ನಡೆಯುತ್ತಿದ್ದು, ಜೆಡಿಎಸ್ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ ಎಂದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement