ನರೇಂದ್ರ ಮೋದಿ ಮತ್ತು ಯಡಿಯೂರಪ್ಪ
ಬೆಂಗಳೂರು: ಮಿಷನ್ 150 ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ರಣಕ್ಕೆ ಎಂಟ್ರಿ ಕೊಟ್ಟ ಬಿಜೆಪಿ, ಸಿದ್ದರಾಮಯ್ಯ ಸರ್ಕಾರಕ್ಕೆ ಬದಲಿಗೆ ಪರ್ಯಾಯ ಸರ್ಕಾರ ತಾವು ನೀಡುವುದಾಗಿ ಬಿಂಬಿಸಿಕೊಳ್ಳುತ್ತಿದೆ,
ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಡಿಯೂರಪ್ಪ ಬಿಜೆಪಿ ಗೆ ವಾಪಾಸಾದರು. ರೈತ ಪರ ಎಂಬುದಾಗಿ ಘೋಷಿಸಿಕೊಂಡಿದ್ದ ಯಡಿಯೂರಪ್ಪ ಅವರನ್ನು ಬಿಟ್ಟು, ಬಿಜೆಪಿ ತಮ್ಮ ಗೆಲುವಿಗೆ ನರೇಂದ್ರ ಮೋದಿ ಅವರನ್ನು ಕರೆದು ತಂದಿದೆ.
ಜೊತೆಗೆ ಕರ್ನಾಟಕ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಸುಮಾರು 21 ರ್ಯಾಲಿಗಳಲ್ಲಿ ಪಾಲ್ಗೋಂಡಿದ್ದಾರೆ, ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು, ಅತಂತ್ರ ವಿಧಾನಸಭೆ ಎಂದು ವರದಿ ಮಾಡಿದ್ದು, ಬಿಜೆಪಿ 2ನೇ ಸ್ಥಾನ ಸಿಗಲಿದೆ ಎಂದು ಹೇಳಿದೆ.
ರಾಜ್ಯದಲ್ಲಿ ಮೋದಿ ಕೈಗೊಂಡ ರ್ಯಾಲಿಗಳಲ್ಲಿ ಬಂದಿದ್ದ ಜನ ಸ್ತೋಮ ನೆರೆದಿತ್ತು. ಹೀಗಾಗಿ 2ರಿಂದ 3 ಪರ್ಸೆಂಟ್ ಬಿಜೆಪಿಗೆ ಮತ ಹೆಚ್ಚುವ ಸಾಧ್ಯತೆಗಳಿವೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿವೆ,
ಪ್ರಧಾನಿ ಮೋದಿ ಅವರು ನಡೆಸಿದ ರ್ಯಾಲಿಗಳಿಂದ ಬಿಜೆಪಿ ಕೇಡರ್ ನ ಆತ್ಮ ವಿಶ್ವಾಸ ಹೆಚ್ಚಿದೆ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಮೈಸೂರಿನ ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿರುದ್ಧ ಕಣಕ್ಕಿಳಿಸದೇ ಇದ್ದದ್ದು, ಹಳೇ ಮೈಸೂರು ಭಾಗದಲ್ಲಿ ಪಕ್ಷದ ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ನಿರ್ಧಾರದಿಂದಾಗಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಚಾರದಲ್ಲಿ ತನ್ನು ಬಿರುಸು ಕಳೆದುಕೊಳ್ಳಲು ಕಾರಣವಾಯಿತು.
ಇನ್ನೂ ಬಾದಾಮಿಯಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದ್ದು ಬಿಜೆಪಿ ಉತ್ತಮ ಕಾರ್ಯತಂತ್ರವಾಗಿದೆ, ಜೊತೆಗೆ ಎರಡು ಕ್ಷೇತ್ರಗಳಲ್ಲಿ ಶ್ರೀರಾಮುಲು ಸ್ಪರ್ಧಿಸಲು ಅವಕಾಶ ನೀಡಿದ್ದು ಪರಿಶಿಷ್ಟ ಪಂಗಡದ ಮತಗಳನ್ನು ಪಡೆಯಲು ಬಿಜೆಪಿಗೆ ಸಹಾಯವಾಗಲಿದೆ.
ಎಲ್ಲದಕ್ಕಿಂತ ಬಿಜೆಪಿ ಗೆಲುವು ಮೋದಿ ಫ್ಯಾಕ್ಟರ್ ಮೇಲೆ ನಿಂತಿದೆ. 224 ಕ್ಷೇತ್ರಗಳಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ 113 ಪಡೆಯುವಲ್ಲಿ ಎಷ್ಟರ ಮಟ್ಟಿಗೆ ಮೋದಿ ಅಲೆ ಕಾರಣವಾಗುತ್ತದೆ ಎಂಬುದನ್ನು ಕಾದು ನೋಡಬೇಕು.