ರಾಜಕೀಯ

ಚುನಾವಣೆ: ಧಾರವಾಡದ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Nagaraja AB

ಧಾರವಾಡ : ಕಾಂಗ್ರೆಸ್  ಅಭ್ಯರ್ಥಿ ವಿನಯ್ ಕುಲಕರ್ಣೀ ಅವರಿಗೆ ಮತ ನೀಡುವಂತೆ ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಗಳು ಮತದಾರರಿಗೆ ಹೇಳುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಧಾರವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  ಪ್ರತಿಭಟನೆ ನಡೆಸಿದ್ದಾರೆ.

ಕರಡಿಗುಡ್ಡ ಗ್ರಾಮದ ಮತಗಟ್ಟೆ ಸಂಖ್ಯೆಯ 58ರ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಚುನಾವಣಾ ಆಯೋಗದ  ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿನಯ್ ಕುಲಕರ್ಣೀ ಲಿಂಗಾಯಿತ ಸಮುದಾಯದ ಮುಖಂಡರಾಗಿದ್ದು, ಧಾರವಾಡದ ಶಾಸಕರೂ ಆಗಿದ್ದಾರೆ. ಈ  ಕ್ಷೇತ್ರದಲ್ಲಿ  ಮರು ಮತದಾನ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.

ಮಾಜಿ ಶಾಸಕ ಅಯ್ಯಪ್ಪ ದೇಸಾಯಿ ಅವರ ಪುತ್ರ ಅಮೃತ ದೇಸಾಯಿ ಬಿಜೆಪಿ ಅಭ್ಯರ್ಥಿಯಾಗಿದ್ದು, ವಿನಯ್ ಕುಲಕರ್ಣೀಗೆ ಪ್ರಬಲ ಪೈಪೋಟಿ ನೀಡಿದ್ದಾರೆ.  2013ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ದೇಸಾಯಿ  ಕುಲಕರ್ಣೀ ವಿರುದ್ಧ ಸೋತಿದ್ದರು.

SCROLL FOR NEXT