ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಪ್ರತಿಯೊಬ್ಬರೂ ಮೇ.15ರಂದು ಆಶ್ಚರ್ಯಪಡುವಂತೆ ಮಾಡುತ್ತೇವೆ: ಹೆಚ್.ಡಿ. ಕುಮಾರಸ್ವಾಮಿ

ಕರ್ನಾಟಕ ರಾಜ್ಯ ಮುಂದಿನ ಮುಖ್ಯಮಂತ್ರಿಯಾಗುವ ಸಂಪೂರ್ಣ ವಿಶ್ವಾಸವಿದ್ದು, ಮೇ.15ರಂದು ಪ್ರತೀಯೊಬ್ಬರೂ ಆಶ್ಚರ್ಯಪಡುವಂತೆ ಮಾಡುತ್ತೇವೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಹೇಳಿದ್ದಾರೆ...

ಹೆಚ್.ಡಿ. ಕುಮಾರಸ್ವಾಮಿ
Manjula VN
Updated On : 12 May 2018, 1:41 am
ರಾಮನಗರ: ಕರ್ನಾಟಕ ರಾಜ್ಯ ಮುಂದಿನ ಮುಖ್ಯಮಂತ್ರಿಯಾಗುವ ಸಂಪೂರ್ಣ ವಿಶ್ವಾಸವಿದ್ದು, ಮೇ.15ರಂದು ಪ್ರತೀಯೊಬ್ಬರೂ ಆಶ್ಚರ್ಯಪಡುವಂತೆ ಮಾಡುತ್ತೇವೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಹೇಳಿದ್ದಾರೆ. 
ರಾಮನಗರದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಜೊತೆಗೆ ಮತಹಕ್ಕು ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಹುಮತಗಳ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ರಾಜ್ಯದ ಜನತೆ ಈಗಾಗಲೇ ನಿರ್ಧಾರ ಕೈಗೊಂಡಿದ್ದು, ಜೆಡಿಎಸ್ ಪಕ್ಷವನ್ನು ಆಶೀರ್ವದಿಸಲಿದ್ದಾರೆ. ಮೇ.15 ರಂದು ಪ್ರತೀಯೊಬ್ಬರೂ ಆಶ್ಚರ್ಯ ಪಡುವಂತೆ ಮಾಡುತ್ತೇವೆಂದು ತಿಳಿಸಿದ್ದಾರೆ. 

Advertisement

Advertisement

ಸಾಕಷ್ಟು ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ವರದಿಗಳನ್ನು ಮಾಡಿರುವ ಕುರಿತಂತೆ ಇದೇ ವೇಳೆ ಉತ್ತರಿಸಿರುವ ಅವರು, ಸಮೀಕ್ಷೆಯ ವರದಿಗಳೆಲ್ಲವೂ ಯೂ ಟರ್ನ್ ಹೊಡೆಯಲಿದೆ. ಕರ್ನಾಟಕ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿಯಾಗುವ ಎಲ್ಲಾ ವಿಶ್ವಾಸ ನನಗಿದೆ ಎಂದಿದ್ದಾರೆ. 
ಈ ಬಾರಿಯ ರಾಜ್ಯ ಚುನಾವಣೆ ಅತ್ಯಂತ ಪ್ರಮುಖವಾದದ್ದು. ರಾಜ್ಯದ ಜನತೆಗೂ ಅತ್ಯಂತ ಮುಖ್ಯವಾದದ್ದು. ರಾಜ್ಯದ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರಿಗೆ ಅವಕಾಶಗಳನ್ನು ನೀಡಿತ್ತು. ಇದೀಗ ನಾನೊಬ್ಬ ಬಾಕಿಯಿದ್ದೇನೆ. ನಾನು ಉತ್ತಮ ಅಭ್ಯರ್ಥಿ ಕೂಡ ಹೌದು ಎಂದು ಹೇಳಿದ್ದಾರೆ. 
ಜೆಡಿಎಸ್ ಬಹುಮತ ಗಳಿಸಲು ಸಾಧ್ಯವಾಗದೇ ಹೋದರೆ ಎಂಬ ಪ್ರಶ್ನೆಗೆ ಉತ್ತರ ನೀಡಿ, ಈ ರೀತಿಯ ಪ್ರಶ್ನೆಗಳೇ ಏಳುವುದಿಲ್ಲ, ಪಕ್ಷ 122 ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement