ರಾಜಕೀಯ

ರಾಜ್ಯಪಾಲರು ’ಕುದುರೆ ವ್ಯಾಪಾರ’ಕ್ಕೆ ಪ್ರೋತ್ಸಾಹ ನಿಡುತ್ತಿದ್ದಾರೆ: ಎಚ್.ಡಿ. ಕುಮಾರಸ್ವಾಮಿ

Raghavendra Adiga
ಬೆಂಗಳೂರು: ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ, ಬಹುಮತ ಸಾಬೀತಿಗೆ  15 ದಿನ ಕಾಲಾವಕಾಶ ನೀಡಿದ್ದಾರೆ. ಇದು ರಾಜ್ಯಪಾಲರು ಬಿಜೆಪಿಯವರು ’ಕುದುರೆ ವ್ಯಾಪಾರ’ ನಡೆಸಲು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆ ಮಾಡಲು ಆಹ್ವಾನಿಸಿರುವುದು ತಪ್ಪಲ್ಲ. ಆದರೆ ಬಹುಮತ ಸಾಬೀತಿಗೆ ನಾಲ್ಕರಿಂದ ಆರು ದಿನಗಳ ಕಾಲಾವಕಾಶ ನಿಡಬೇಕಾಗಿತ್ತು.ಆದರೆ 15 ದಿನ ಅವಕಾಶ ನೀಡಿರುವುದು ಏಕೆ ಎಂದು ಕುಮಾರ ಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಮಣಿಪುರ, ಬಿಹಾರ, ಗೋವಾ, ಮೇಘಾಲಯಗಳಲ್ಲಿ ಬಿಜೆಪಿ ಒಂದೊಂದು ಬಗೆಯಲ್ಲಿ ಅವಕಾಶವಾದಿ ರಾಜಕಾರಣ ನಡೆಸಿದ ಬಿಜೆಪಿ ಇಲ್ಲಿ ರಾಜ್ಯಪಾಲರನ್ನು ಬಳಸಿಕೊಂಡು ಸಂವಿಧಾನ ವಿರೋಧಿ ಕಾರ್ಯಕ್ಕೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.
SCROLL FOR NEXT