ರಾಜಕೀಯ

ಜೆಡಿಎಸ್‌ ಬಂಡಾಯ ಶಾಸಕರು ಅನರ್ಹತೆ ಭೀತಿಯಿಂದ ಪಾರು

Lingaraj Badiger
ಬೆಂಗಳೂರು: 2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದ ಜೆಡಿಎಸ್ ಬಂಡಾಯ ಶಾಸಕರು ಅನರ್ಹತೆ ಭೀತಿಯಿಂದ ಪಾರಾಗಿದ್ದಾರೆ.
ಏಳು ಜೆಡಿಎಸ್ ಶಾಸಕರ ಅನರ್ಹತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಿರ್ಗಮಿತ  ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರು ಇಂದು ಬೆಳಗ್ಗೆ ವಜಾಗೊಳಿಸಿದ್ದಾರೆ.
ಮೇ 17 ರಂದೇ 14ನೇ ವಿಧಾನಸಭೆ ವಿಸರ್ಜನೆಯಾಗಿದೆ. ಹಾಗಾಗಿ ಶಾಸಕರ ಅನರ್ಹತೆ ಕೋರಿದ ಅರ್ಜಿಗೆ ಸಾಂವಿಧಾನಿಕ ಮೌಲ್ಯ ಇಲ್ಲ ಎಂದು ಹೇಳಿ ಕೆ.ಬಿ.ಕೋಳಿವಾಡ  ಅರ್ಜಿ ವಜಾ ಮಾಡಿದ್ದಾರೆ.
ಅಡ್ಡಮತದಾನ ಮಾಡಿದ್ದ ಏಳು ಶಾಸಕರ ಪೈಕಿ ಮೂರು ಮಂದಿ ಮರು ಆಯ್ಕೆಯಾಗಿದ್ದು, ಅವರು ಅನರ್ಹತೆ ಭೀತಿ ಎದುರಿಸುತ್ತಿದ್ದರು.
ಕೆ.ಬಿ.ಕೋಳಿವಾಡ ಅವರು ನೂತನ ಸ್ವೀಕರ್ ನೇಮಕವಾಗುವವರೆಗೆ ಸ್ಪೀಕರ್ ಆಗಿ ಇರುತ್ತಾರೆ. ಇಂದು ಮಧ್ಯಾಹ್ನ ಹಂಗಾಮಿ ಸ್ವೀಕರ್ ಆಗಿ ಕೆಜಿ ಬೋಪಯ್ಯ ಅವರು ನೇಮಕಗೊಂಡಿದ್ದಾರೆ.
SCROLL FOR NEXT