ಡಿ.ಕೆ ಶಿವಕುಮಾರ್ 
ರಾಜಕೀಯ

ಬಿಜೆಪಿಯವರನ್ನು ಆಪರೇಟ್ ಮಾಡುವುದು ಅಸಾಧ್ಯ, ನಾನು ಯಾವುದೇ ಹಣ ಕೊಟ್ಟಿಲ್ಲ: ಡಿ.ಕೆ ಶಿವಕುಮಾರ್

ರಾಮನಗರ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಎಲ್​.ಚಂದ್ರಶೇಖರ್​ಹಿಂದೆ ಸರಿಯುವುದಕ್ಕೆ ಡಿಕೆಶಿ ಬ್ರದರ್ಸ್​ಕಾರಣ ಆರೋಪಕ್ಕೆ ಜಲ ಸಂಪನ್ಮೂಲ...

ಬಳ್ಳಾರಿ:  ರಾಮನಗರ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಎಲ್​.ಚಂದ್ರಶೇಖರ್​ಹಿಂದೆ ಸರಿಯುವುದಕ್ಕೆ ಡಿಕೆಶಿ ಬ್ರದರ್ಸ್​ಕಾರಣ  ಆರೋಪಕ್ಕೆ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬಳ್ಳಾರಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ  ಶಿವಕುಮಾರ್ ಚಂದ್ರಶೇಖರ್ ಹಿಂದೆ ಸರಿದಿರುವ ಬಗ್ಗೆ  ನನಗೇನು ಗೊತ್ತಿಲ್ಲ. ನನ್ನ ಗಮನಕ್ಕೇನು ಬಂದಿತ್ತೆಂದರೆ ಯೋಗೇಶ್ವರ್​, ಅಶ್ವಥ್​ ನಾರಾಯಣ್ ಸೇರಿ ಹಲವು ಬಿಜೆಪಿ ಮುಖಂಡರು ನ.6 ರಂದು ಬಿಜೆಪಿ ಸರ್ಕಾರ ರಚನೆ ಮಾಡುತ್ತಾರೆ. ಬ್ಯಾಗ್​ಗಳಲ್ಲಿ ದುಡ್ಡಿನ ಕಂತೆ ತೆಗೆದುಕೊಂಡು ನಮ್ಮ ಎಂಎಲ್​ಎಗಳಿಗೆ ಕೇಳಲಿದ್ದಾರೆ. ಇದೇ ನಿಟ್ಟಿನಲ್ಲಿ ಬಿಎಸ್​ವೈ ಕೂಡ ನ.6ರಂದು ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದರು ಎಂದು ಟಾಂಗ್​ ನೀಡಿದರು.
ನಾನು ರಾಮನಗರಕ್ಕೆ ಹೋಗೇ ಇಲ್ಲ. ಇದರ ಬಗ್ಗೆ ನನಗೇನು ಗೊತ್ತಿಲ್ಲ. ಇಂದು ರಾಮನಗರಕ್ಕೆ ತೆರಳಿ ಧ್ವಜಾರೋಹಣ ಮಾಡಬೇಕೆಂದಿದ್ದೆ. ಆದರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂಬ ಕಾರಣಕ್ಕೆ ಅಲ್ಲಿಗೆ ತೆರಳಿಲ್ಲ  ಎಂದು ಸ್ಪಷ್ಟನೆ ನೀಡಿದರು.
ಚಂದ್ರಶೇಖರ್​ ಅವರ ಆಪರೇಷನ್​ ಕುರಿತು ಮಾಹಿತಿ ಇರಲಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ , ಬಿಜೆಪಿಯವರನ್ನು ಆಪರೇಟ್​ ಮಾಡುವುದಕ್ಕಾಗುತ್ತೇನ್ರಿ? ಅವರು ಬಹಳ ನಿಸ್ಸೀಮರು, ಅವರನ್ನು ಆಪರೇಟ್​ ಮಾಡುವುದು ಅಸಾಧ್ಯ. ನಾನು ಯಾವುದೇ ಹಣ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel