ಬೆಂಗಳೂರು: ಕೇರಳ ನೀರಾವರಿ ಸಂಪನ್ಮೂಲ ಸಚಿವ ಹಾಗೂ ಜೆಡಿಎಸ್ ಶಾಸಕ ಮ್ಯಾಥ್ಯೂ ಟಿ ಥಾಮಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ದೇವೇಗೌಡ ಅವರ ಈ ತೀರ್ಮಾನಕ್ಕೆ ಕೇರಳದ ಜೆಡಿಎಸ್ ಪಕ್ಷದಲ್ಲಿರುವ ಹಿರಿಯ ನಾಯಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ದೇವೇಗೌಡ ಅವರ ನಿರ್ಧಾರ ಆಶ್ಚರ್ಯವನ್ನು ತಂದಿದೆ ಎಂದು ಹೇಳಿದ್ದಾರೆ.
ಕಚೇರಿಯಲ್ಲಿ ಸಚಿವರ ಪತ್ನಿ ಸಿಬ್ಬಂದಿಗಳೊಂದಿಗೆ ಜಾತಿವಾದಿ ನಿಂದನೆಗಳನ್ನು ಮಾಡುತ್ತಿರುವ ಹಿನ್ನಲೆಯಲ್ಲಿ ದೇವೇಗೌಡ ಅವರು ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಕೇರಳದ ಆಡಳಿತಾರೂಢ ಎಲ್'ಡಿಎಫ್ ಪಕ್ಷದಲ್ಲಿ ಜೆಡಿಎಸ್ ಪಕ್ಷದ ಮೂವರು ಶಾಸಕರಿದ್ದಾರೆ. ಇದರಲ್ಲಿ ಥಾಮಸ್ ಕೂಡ ಒಬ್ಬರಾಗಿದ್ದಾರೆ.
ಸಚಿವ ಸ್ಥಾನದಲ್ಲಿರಲು ಥಾಮಸ್ ಅವರಿಗೆ ಅವಕಾಶ ನೀಡಲಾಗಿತ್ತು. ಇದೀಗ ಮತ್ತೊಬ್ಬ ಶಾಸಕರಿಗೆ ಆ ಅವಕಾಶ ನೀಡುವುದು ಸಾಮಾನ್ಯ. ಹೀಗಾಗಿ ಪಕ್ಷ ಮತ್ತೊಬ್ಬ ಶಾಸಕರಿಗೆ ಆ ಅವಕಾಶ ನೀಡುವ ಸಲುವಾಗಿ ಥಾಮಸ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ ಎಂದು ಕೇರಳ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಾನಿಶ್ ಅಲಿಯವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics