ರಾಜಕೀಯ

ಉಪ ಚುನಾವಣೆ ಸೋಲಿನಿಂದ ಎಚ್ಚೆತ್ತ ಬಿಜೆಪಿ: ಡಿ.10 ರಂದು ಸರ್ಕಾರದ ವಿರುದ್ಧ ಬೃಹತ್ ರ್ಯಾಲಿ

Shilpa D
ಬೆಂಗಳೂರು: ಉಪ ಚುನಾವಣೆಯಲ್ಲಾದ ಹಿನ್ನೆಡೆಯಿಂದ ಎಚ್ಚೆತ್ತಿರುವ ರಾಜ್ಯ ಬಿಜೆಪಿ, ಲೋಕಸಭೆ ಚುನಾವಣೆಗೆ ಮೊದಲೇ ರಾಜ್ಯ ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದೆ. 
ಸಾಲಮನ್ನಾ ವಿಳಂಬ, ಕಬ್ಬು ಬೆಳೆಗಾರರ ಸಮಸ್ಯೆ, ಬರ ಪರಿಸ್ಥಿತಿ, ಕೊಡಗು ಪುನರ್ವಸತಿ ನಿರ್ವಹಣೆ ಸಮಸ್ಯೆ, ಹೀಗೆ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಅಧಿವೇಶನಕ್ಕೆ ಸಾಕ್ಷಿಯಾಗಲಿರುವ ಬೆಳಗಾವಿ ಸುವರ್ಣಸೌಧದೆದುರು ಡಿ.10 ರಂದು 1 ಲಕ್ಷ ಜನರನ್ನು ಸೇರಿಸಿ ಪ್ರತಿಭಟಿಸಲು ನಿರ್ಧರಿಸಿದೆ.ಗುರುವಾರ ನಡೆದ ಬಿಜೆಪಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 
ಸರ್ಕಾರ ತಾಲೂಕುಗಳಲ್ಲಿನ ಬರಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿರುವ ಬಿಜೆಪಿ, ಬರ ಅಧ್ಯಯನಕ್ಕಾಗಿ ಐದು ತಂಡಗಳ ಜತೆಗೆ ಕೊಡಗು ಮರು ನಿರ್ಮಾಣ ಉದ್ದೇಶದಿಂದ ಮತ್ತೊಂದು ತಂಡ ರಚಿಸಿದೆ.
ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ರಮೇಶ್ ಜಿಗಜಿಣಗಿ, ಕೋಟ ಶ್ರೀನಿವಾಸ ಪೂಜಾರಿ, ಅವರನ್ನೊಳಗೊಂಡ ತಂಡ ಬರ ಅಧ್ಯಯನ ನಡೆಸಲಿದೆ.
ಡಿ.ವಿ.ಸದಾನಂದಗೌಡ ಅವರ ತಂಡ ಡಿ.3 ರಿಂದ 5ರವರೆಗೆ  ಕೊಡಗಿನಲ್ಲಿ ಪ್ರವಾಸ ನಡೆಸಿ ವರದಿ ನೀಡಲಿವೆ ಎಂದು ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
SCROLL FOR NEXT