ಪ್ರತಿಭಟನೆಯಲ್ಲಿ ಮೊಹಮದ್ ನಲಪಾಡ್
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಭಾಗವಹಿಸಿದ್ದರು, ವಿದ್ವತ್ ಮೇಲೆ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮೊಹಮದ್ ನಲಪಾಡ್ ನನ್ನು ಆರು ವರ್ಷಗಳ ಕಾಲ ಅಮಾನತು ಮಾಡಲಾಗಿದೆ.
ನಿಷೇಧದ ಹೊರತಾಗಿಯೂ ಮೊಹಮದ್ ನಲಪಾಡ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಕೇವಲ ಒಂದು ಬಾರಿಯಲ್ಲ ಹಲವು ಪ್ರತಿಭಟನೆಗಳಲ್ಲಿ ನಲಪಾಡ್ ಭಾಗವಹಿಸುತ್ತಿದ್ದಾರೆ, ಸೆಪ್ಟಂಬರ್ ನಲ್ಲಿ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಶಾಸಕ ಹ್ಯಾರಿಸ್ ಕೈಗೊಂಡ ಪ್ರತಿಭಟನೆಯಲ್ಲಿಯೂ ನಲಪಾಡ್ ಭಾಗವಹಿಸಿದ್ದರು.
ನಾನು ಈ ದೇಶದ ಪ್ರಜೆ, ಹಾಗಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ ಎಂದು ನಲಪಾಡ್ ಸಮರ್ಥಿಸಿಕೊಂಡಿದ್ದಾರೆ, ಮೊಹಮದ್ ತಪ್ಪಿತಸ್ಥ ಎಂದು ಇನ್ನೂ ಸಾಬೀತಾಗಿಲ್ಲ, ಪ್ರಕರಣ ಇನ್ನೂ ಮುಗಿದಿಲ್ಲ, ಪ್ರತಿಭಟನೆಯಲ್ಲಿ ದೇಶದ ಯಾವ ನಾಗರಿಕ ಬೇಕಾದರೂ ಪಾಲ್ಗೊಳ್ಳೂಬಹುದು ಅದನ್ನು ತಡೆಯುವ ಹಕ್ಕಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ನಲಪಾಡ್ ಪಾಲ್ಗೊಂಡ ಬಗ್ಗೆ ಕಾಂಗ್ರೆಸ್ ಯಾವುದೇ ಸಮರ್ಥನೆ ನೀಡಿದ್ದರೂ ಆರು ವರ್ಷದ ಮುಂಚೆಯೇ ಅಮಾನತು ನಿಷೇಧಿಸಲು ಸಾಧ್ಯವಿಲ್ಲ. ಈ ಸಂಬಂಧ ಹೈಕಮಾಂಡ್ ನಿರ್ಧರಿಸಲಿದೆ ಎಂದು ಖಂಡ್ರೆ ತಿಳಿಸಿದ್ದಾರೆ.
ಇನ್ನೂ ನಲಪಾಡ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಬಿಜೆಪಿ ಟೀಕಿಸಿದೆ, ಕಾಂಗ್ರೆಸ್ ಗೂಂಡಾಗಿರಿಯನ್ನು ಪ್ರೋತ್ಸಾಹಿಸುತ್ತಿದೆ ಮೊಹಮದ್ ನಲಪಾಡ್ ನಂತರ ಸಮಾಜ ವಿರೋಧಿ ಎಲಿಮೆಂಟ್ ಗಳನ್ನು ಬೆಂಬಲಿಸುವುದು ಸರಿಯಲ್ಲ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಆರೋಪಿಸಿದ್ದಾರೆ. ಇನ್ನೂ ನಲಪಾಡ್ ಭಾಗವಹಿಸಿದ್ದ ಪ್ರತಿಭಟನೆಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.