ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ, ಎಚ್ ಎಎಲ್ ಉದ್ಯೋಗಿಗಳ ಜೊತೆ ಸಂವಾದಕ್ಕಾಗಿ ಆಗಮಿಸಿದ್ದ ರಾಹುಲ್ ಅವರನ್ನು ಕುಮಾರಸ್ವಾಮಿ ರಾಹುಲ್ ಭೇಟಿ ಮಾಡಿದ್ದರು..
ಮಿನ್ಸ್ಕ್ ಸ್ಕೇರ್ ನಲ್ಲಿ ಎಚ್ ಎ ಎಲ್ ಉದ್ಯೋಗಿಗಳ ಜೊತೆ ಸಂವಾದಕ್ಕೂ ಮುನ್ನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಕುಮಾರ ಸ್ವಾಮಿ ರಾಹುಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ನವೆಂಬರ್ 3 ರಂದು ನಡೆಯುವ ಉಪಚುನಾವಣೆ ಹಾಗೂ ಬಿಎಸ್ ಪಿ ಸಚಿವ ಎನ್. ಮಹೇಶ್ ಅವರ ರಾಜಿನಾಮೆ ಸಂಬಂಧ ರಾಹುಲ್ ಅವರ ಜೊತೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.