ಶಿವಮೊಗ್ಗ ಉಪಚುನಾವಣೆ: ಅಖಾಡದಲ್ಲಿ ಕೋಟ್ಯಾಧಿಪತಿಗಳು 
ರಾಜಕೀಯ

ಶಿವಮೊಗ್ಗ ಉಪಚುನಾವಣೆ: ಅಖಾಡದಲ್ಲಿ ಕೋಟ್ಯಾಧಿಪತಿಗಳು

ಲೋಕಸಭೆ, ವಿಧಾನಸಭೆ ಉಪ ಚುನಾವಣೆ ಕಾವು ಹೆಚ್ಚಾಗತೊಡಗಿದ್ದು, ಈ ನಡುವೆ ಶಿವಮೊಗ್ಗ ಲೋಕಸಭಾ ಉಪಚುನಾವಣೆ ಕಣದಲ್ಲಿ ಕೋಟ್ಯಾಧಿಪತಿ ಅಭ್ಯರ್ಥಿಗಳು ನಿಂತಿದ್ದಾರೆ...

ಶಿವಮೊಗ್ಗ: ಲೋಕಸಭೆ, ವಿಧಾನಸಭೆ ಉಪ ಚುನಾವಣೆ ಕಾವು ಹೆಚ್ಚಾಗತೊಡಗಿದ್ದು, ಈ ನಡುವೆ ಶಿವಮೊಗ್ಗ ಲೋಕಸಭಾ ಉಪಚುನಾವಣೆ ಕಣದಲ್ಲಿ ಕೋಟ್ಯಾಧಿಪತಿ ಅಭ್ಯರ್ಥಿಗಳು ನಿಂತಿದ್ದಾರೆ. 
ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹಾಗೂ ಜೆಡಿಯು ಅಭ್ಯರ್ಥಿ ಮಹಿಮಾ ಜೆ.ಪಟೇಲ್ ಆಸ್ತಿ ಘೋಷಿಸಿದ್ದಾರೆ. 
ಬಿ.ವೈ. ರಾಘವೇಂದ್ರ ಅವರು ರೂ.51.63 ಕೋಟಿ ಆಸ್ತಿ ಒಡೆಯರಾಗಿದ್ದು, ತಮ್ಮ ಪತ್ನಿ ತೇಜಸ್ವಿನಿ ಹೆಸರಿನಲ್ಲಿ ಒಟ್ಟು ರೂ.6.96 ಕೋಟಿ ಆಸ್ತಿ ಇರುವುದಾಗಿ ನಾಮಪತ್ರ ಸಲ್ಲಿಸಿ ಘೋಷಿಸಿದ್ದಾರೆ. 
ರಾಘವೇಂದ್ರ ಒಟ್ಟು ರೂ.28.92 ಕೋಟಿ ಮೌಲ್ಯದ ಚರಾಸ್ತಿ, ರೂ.2.71 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಒಬ್ಬ ಪುತ್ರನ ಹೆಸರಿನಲ್ಲಿ ರೂ.14.06 ಲಕ್ಷ ಮೌಲ್ಯದ ಚರಾಸ್ತಿ, ರೂ.4.32 ಲಕ್ಷ ಮೌಲ್ಯದ ಸ್ಥಿರಾಸ್ತಿ ಹಾಗೂ ಇನ್ನೋರ್ವ ಪುತ್ರನ ಹೆಸರಿನಲ್ಲಿ ರೂ.10.81 ಲಕ್ಷ ಮೌಲ್ಯದ ಚರಾಸ್ತಿ ಇದೆ ಎಂದು ಹೇಳಿಕೊಂಡಿದ್ದಾರೆ. 
ಇದರಂತೆ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಹಿಮಾ ಜೆ.ಪಟೇಲ್ ಕೂಡ ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. 
ಮಹಿಮಾರ ಒಟ್ಟು ಚರಾಸ್ತಿ ಮೌಲ್ಯ ರೂ.1.19 ಲಕ್ಷ, ಪತ್ನಿ ಶೈಲಜಾ ಬಳಿ ರೂ.87078 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿ ಇದ್ದು, ಪ್ರಸ್ತುತ ಅಂದಾಜು ಮಾರುಕಟ್ಟೆ ಮೌಲ್ಯದಂತೆ ಮಹಿಮಾ ಪಟೇಲ್ ಬಳಿ ರೂ.4.92 ಕೋಟಿ ಹಾಗೂ ಪತ್ನಿ ಬಳಿ ರೂ.4.63 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್'ನಲ್ಲಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?