ರಾಜಕೀಯ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಸ್ಪರ್ಧೆಯಿಂದ ಜನಾರ್ಧನ ಪೂಜಾರಿ ಔಟ್; ಕಾಂಗ್ರೆಸ್ ನಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕೆ?

Shilpa D
ಮಂಗಳೂರು: ತಮ್ಮ ವಯಸ್ಸಿನ ಕಾರಣದಿಂದಾಗಿ ಮುಂಬರುವ ಲೋಕಸಭೆ ಚುನಾವಣೆಯಿಂದ ಸ್ಪರ್ದಿಸದಿರಲು ಕಾಂಗ್ರೆಸ್ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ನಿರ್ಧರಿಸಿದ್ದಾರೆ. ಹೀಗಾಗಿ ದಕ್ಷಿಣಕನ್ನಡ ಲೋಕಸಭೆ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಯಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಈ ಬೆಳವಣಿಗೆ ಪಕ್ಷಕ್ಕೆ ದೊಡ್ಡ ಅಚ್ಚರಿ ಉಂಟು ಮಾಡಿದೆ,  ಈಗಾಗಾಲೇ ಹಲವು ನಾಯಕರು ಟಿಕೆಟ್ ರೇಸ್ ನಲ್ಲಿರುವು ಮುಂದಿನ ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬಿರುವ ಸಾದ್ಯತೆಗಳಿವೆ. 
ಬುಧವಾರ ಮಂಗಳೂರಿನಲ್ಲಿ ಈ ಸಂಬಂಧ ಸಭೆ ನಡೆಸಲಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಕೇಂದ್ರ ಸಮಿತಿ ಅಧ್ಯಕ್ಷ ಮೊಹಮದ್ ಭಾಗವಹಿಸಿದ್ದರು. ಮುಸ್ಲಿಂ ಸಮುದಾಯದ ಹಲವರು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸುವಂತೆ ಒತ್ತಾಯಿಸಿದ್ದಾರೆ, 
ನವೆಂಬರ್ 30 ರೊಳಗೆ ಪಕ್ಷದ ಅಭ್ಯರ್ಥಿ  ಹೆಸರು ಪ್ರಟಿಸುವಂತೆ ಡೆಡ್ ಲೈನ್ ನೀಡಲಾಗಿದೆ,ಒಂದು ವೇಳೆ ಪ್ರಕಟಿಸದಿದ್ದರೇ ಡಿಸೆಂಬರ್ 15 ರಂದು  ನೆಹರು ಮೈದಾನದಲ್ಲಿ ಸಭೆ ನಡೆಸಿ ಸೂಕ್ತ  ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ, 
 ಹಿರಿಯ ನಾಯಕರಾದ ಬಿ.ಕೆ ಹರಿಪ್ರಸಾದ್, ರಮಾನಾಥ್ ರೈ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ, ಆದರೆ ಈ ಸಂಬಂಧ ಪ್ರತಿಕ್ರಿಯಿಸಲು  ರಮಾನಾಥ ರೈ ನಿರಾಕರಿಸಿದ್ದಾರೆ, 
SCROLL FOR NEXT