ಬೆಂಗಳೂರು: ನವೆಂಬರ್ 3 ರಂದು ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದರೇ ರಾಮನಗರಕ್ಕೆ ಹೇಮಾವತಿ ನೀರು ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.
ರಾಮನಗರ-ಚನ್ನಪಟ್ಟಣ ಅವಳಿ ನಗರಗಳ ಅಭಿವೃದ್ಧಿಗಾಗಿ ಬಿಜೆಪಿ ಶ್ರಮಿಸುವುದಾಗಿ ಹೇಳಿದೆ. ರಾಮನಗರ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ, ಅದರಲ್ಲಿ 15 ಭರವಸೆ ನೀಡಿದ್ದಾರೆ.
ರೇಷ್ಮೆ ಕೃಷಿ ಉತ್ತೇಜಿಸಲು ರೇಷ್ಮೆ ಫಿಲ್ಲೇಚರ್ ಘಟಕ ಹಾಗೂ ಮಾವಿನ ಹಣ್ಣುಸಂಸ್ಕರಣಕ್ಕಾಗಿ ಶೈಥ್ಯಾಗಾರ ಸೇರಿದಂತೆ ಹಲವು ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
ಅರ್ಕಾವತಿ ನದಿ ನೀರಿನ ನವೀಕರಣ, ಆಶ್ರಯ ಮನೆಯೋಜನೆಯಡಿ ಬಡವರಿಗೆ ವಸತಿ, ಸೇರಿದಂತೆ ಹಲವು ಯೋಜನೆ ರೂಪಿಸುವ ಭರವಸೆ ನೀಡಿದ್ದಾರೆ, ಪ್ರಣಾಳಿಕೆ ಬಿಡುಗೆ ಮಾಡಿ ಮಾತನಾಡಿದ ಸದಾನಂದಗೌಡ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.