ರಾಜಕೀಯ

ಜಮಖಂಡಿ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಒಂದಾದ ಬಿಜೆಪಿ ಘಟಾನುಘಟಿಗಳು!

Shilpa D
ಜಮಖಂಡಿ: ಶಾಸಕ ಸಿದ್ದು ನ್ಯಾಮಗೌಡ ನಿಧನದ ನಂತರ ತೆರವಾಗಿದ್ದ ಜಮಖಂಡಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರನ್ನು ಸೋಲಿಸಲು ಬಿಜೆಪಿ ಘಟಾನುಘಟಿಗಳೆಲ್ಲಾ ಒಂದಾಗಿದ್ದಾರೆ. ಈ ಸುವರ್ಣವಕಾಶವನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಮುಖಂಡತ್ವದಲ್ಲಿ ಸಂಗಮೇಶ್ ನಿರಾಣಿ, ಬಸವರಾಜ್ ಸಿಂಧೂರ್ ಮತ್ತು ಉಮೇಶ್ ಮಹಾಬಲಶೆಟ್ಟಿ,  ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ್ದಾರೆ. ಶ್ರೀಕಾಂತ್ ಕುಲಕರ್ಣಿ ಈ ಬಾರಿ ಗೆಲುವು  ಸಾಧಿಸುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ  ನಿರಾಣಿ 25 ಸಾವಿರ ಮತಗಳಿಸಿದ್ದರು, ಕುಲಕರ್ಣಿ ಸಿದ್ದು ನ್ಯಾಮಗೌಡ ವಿರುಗ್ಘ 2,700 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಕುಲಕರ್ಣಿ ಅವರನ್ನು ಕಣಕ್ಕಿಳಿಸದಂತೆ ಹಲವರು ಒತ್ತಾಯ ಮಾಡಿದ್ದರು, ಈ ಎಲ್ಲಾ ಅಡೆತಡೆಗಳ ನಡುವೆ ಕುಲಕರ್ಣಿ ಅವರನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಶ್ರೀಕಾಂತ್ ಕುಲಕರ್ಣಿ ಅವರ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಭಿನ್ನಮತೀಯರ ಚಿತಾವಣೆಯಿಂದಾಗಿ ಬಿಜೆಪಿ ಅಭ್ಯರ್ಥಿ ಸೋಲಾಗಿತ್ತು, ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಅಭ್ಯರ್ಥಿ ಅನನುಭವಿ, ಕ್ಷೇತ್ರದಲ್ಲಿ ಮತ್ತಷ್ಟು ಕೆಲಸ ಮಾಡುವ  ಅವಶ್ಯಕತೆಯಿದೆ, ಲಿಂಗಾಯತ ಮತಗಳೇ ಹೆಚ್ಚು ಇರುವ ಈ ಕ್ಷೇತ್ರದಲ್ಲಿ ಸಿದ್ದು ನ್ಯಾಮಗೌಡ ಅಭಿವೃದ್ಧಿ ವೈಫಲ್ಯ ತಮ್ಮ ಗೆಲುವಿಗೆ ಕಾರಣವಾಗಲಿದೆ ಎಂದು ಶ್ರೀಕಾಂತ್ ಕುಲಕರ್ಣಿ ಹೇಳಿದ್ದಾರೆ.
ಕಾಂಗ್ರೆಸ್ ಸಿದ್ದು ನ್ಯಾಮಗೌಡ ನಿಧನದ ಅನುಕಂಪದ ಅಲೆಯ ಮೇಲೆ ಗೆಲುವು ಸಾಧಿಸುವ ಭರವಸೆಯಲ್ಲಿದೆ, ಕಾಂಗ್ರೆಸ್ ನ ಪ್ರಮುಖ ನಾಯಕರು ಆನಂದ್ ನ್ಯಾಮಗೌಡ ಅವರ ಗೆಲುವಿಗಾಗಿ ಬಂದು ಪ್ರಚಾರ ನಡೆಸಿದ್ದಾರೆ.
SCROLL FOR NEXT