ರಾಜಕೀಯ

ವಿಧಾನ ಪರಿಷತ್ ಚುನಾವಣೆ : ಕೊನೆ ಕ್ಷಣದಲ್ಲಿ ಕಣದಿಂದ ಬಿಜೆಪಿ ಹಿಂದೆ ಸರಿಯಲು ಕಾರಣವೇನು?

Shilpa D
ಬೆಂಗಳೂರು: ವಿಧಾನಪರಿಷತ್ ನ ಮೂರು ಸ್ಥಾನಗಳಿಗೆ ಅಕ್ಟೋಬರ್ 4ರಂದು ಉಪ ಚುನಾವಣೆ ನಡೆಯಲಿದ್ದು, ಈವರೆಗೆ ಐದು ನಾಮಪತ್ರ ಸಲ್ಲಿಕೆಯಾಗಿದ, ಅಂತಿಮ ಕ್ಷಣದಲ್ಲಿ ಬಿಜೆಪಿ ಹಿಂದೆ ಸರಿದಿದೆ.  
ಕಾಂಗ್ರೆಸ್ ಪಕ್ಷದ ಎಂಸಿ ವೇಣುಗೋಪಾಲ್, ನಜೀರ್ ಅಹ್ಮದ್ ಹಾಗೂ ಜೆಡಿಎಸ್ ನಿಂದ ರಮೇಶ್ ಗೌಡ ಸೇರಿದಂತೆ ಐದು ಮಂದಿ ನಾಮಪತ್ರ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.
ವಿಧಾನಪರಿಷತ್ ಸದಸ್ಯರಾಗಿದ್ದ ಕೆಎಸ್ ಈಶ್ವರಪ್ಪ, ಜಿ.ಪರಮೇಶ್ವರ್ ಹಾಗೂ ವಿ.ಸೋಮಣ್ಣ ಅವರಿಂದ ತೆರವಾದ ಮೂರು ಪರಿಷತ್ ಸ್ಥಾನಗಳಿಗೆ ಅಕ್ಟೋಬರ್ 4ರಂದು ಚುನಾವಣೆ ನಡೆಯಲಿದೆ
ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಅಥವಾ ಬಿಜೆ ಪುಟ್ಟಸ್ವಾಮಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿತ್ತು, ಆದರೆ ಬಿಜೆಪಿ ಕಣದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಈ ಬಾರಿ ಅಡ್ಡ ಮತದಾನದ ಸಮಸ್ಯೆ ಇರುವುದಿಲ್ಲ.ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಡ್ಡಮತದಾನದ ಬಿಕ್ಕಟ್ಟಿನಿಂದ ಪಾರಾದಂತಾಗಿದೆ.
ಅಕ್ಟೊಬರ್ 4 ರಂದು ನಡೆಯುವ ಉಪ ಚುನಾವಣೆ ವೇಳೆ ಬಹು ದೊಡ್ಡ ಡ್ರಾಮ್ ನಡೆಯುವ ಸಾಧ್ಯತೆಯಿತ್ತು,. ಯಡಿಯೂರಪ್ಪ ಪದೇ ಪದೇ ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಆತಂಕ ಎದುರಾಗಿತ್ತು.
ಗುತ್ತೇದಾರ್. ಯೋಗೇಶ್ವರ್ ಮತ್ತು ಪುಟ್ಟಸ್ವಾಮಿ ಭಾನುವಾರ ನಾಮಪತ್ರ ಸಲ್ಲಿಸಲು ಸಿದ್ಧರಾಗಿದ್ದರು. ಆದರೆ ಬಿಜೆಪಿ ಗೆಲುವಿಗೆ ಬೇಕಾದ 112 ಸಂಖ್ಯಾ ಬಲ ಇಲ್ಲದೆ ಇದ್ದ ಕಾರಣ ಕಣದಿಂದ ಹಿಂದೆ ಸರಿದಿದೆ. ಕಾಂಗ್ರೆಸ್ ತನ್ನ ಅತೃಪ್ತ ಶಾಸಕರನ್ನು ಬಿಜೆಪಿ ಗಾಳಕ್ಕೆ ಸಿಕ್ಕುವುದನ್ನು ತಪ್ಪಿಸಿದೆ
ಏತನ್ಮಧ್ಯೆ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿಸುವ ಬಗ್ಗೆ ಬಿಜೆಪಿಗೆ ವಿಶ್ವಾಸ ಇಲ್ಲದ ಹಿನ್ನೆಲೆಯಲ್ಲಿ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಗದ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಮುಖಂಡರ ಜೊತೆ ಚರ್ಚೆ ನಡೆಸಿ 
ಕಣದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ.
SCROLL FOR NEXT