ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಭಯ ಬಿಟ್ಟುಬಿಡಿ, ಸರ್ಕಾರ ಸುಭದ್ರವಾಗಿದೆ: ಪಕ್ಷದ ಶಾಸಕರಿಗೆ ಸಿಎಂ ಕುಮಾರಸ್ವಾಮಿ ಅಭಯ

ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಮತದಾನ ಮುಗಿದಿದೆ, ಈಗ ಯಾವ ಪಕ್ಷ ಎಷ್ಟು ಸ್ಥಾನ ಜಯಿಸಲಿದೆ ಎಂಬ ಲೆಕ್ಕಾಚಾರ ಪ್ರಾರಂಭವಾಗಿದ್ದು ಎಲ್ಲಾ ರಾಜಕೀಯ ಪಕ್ಷಗಳ ನಾಯಕರಲ್ಲಿ ತಳಮಳಕ್ಕೆ ಕಾರಣವಾಗಿದೆ

ರೇವು ನಾಯಕ್ ಬೆಳಮಗಿ ಹಾಗೂ ಸಾರಾ ಮಹೇಶ್
Raghavendra Adiga
Updated On : 29 Apr 2019, 8:22 am
ಬೆಂಗಳೂರು: ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಮತದಾನ ಮುಗಿದಿದೆ, ಈಗ ಯಾವ ಪಕ್ಷ  ಎಷ್ಟು ಸ್ಥಾನ ಜಯಿಸಲಿದೆ ಎಂಬ ಲೆಕ್ಕಾಚಾರ ಪ್ರಾರಂಭವಾಗಿದ್ದು ಎಲ್ಲಾ ರಾಜಕೀಯ ಪಕ್ಷಗಳ ನಾಯಕರಲ್ಲಿ ತಳಮಳಕ್ಕೆ ಕಾರಣವಾಗಿದೆ. ಆದರೆ ಈ ನಡುವೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತ್ರ ತಮ್ಮ ಸರ್ಕಾರಕ್ಕೆ ಯಾವ ಭಯವಿಲ್ಲ, ಹೆದರುವ ಅಗತ್ಯವಿಲ್ಲ ಎಂದು ಜೆಡಿಎಸ್ ಶಾಸಕರಿಗೆ ಅಭಯ ನೀಡಿದ್ದಾರೆ.
ಚುನಾವಣೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಪಕ್ಷದ ಶಾಸಕರ ಸಭೆ ನಡೆಸಿದ್ದ ಕುಮಾರಸ್ವಾಮಿ ಕಾಂಗ್ರೆಸ್ ಜತೆಗೆ ಎಲ್ಲವೂ ಚೆನ್ನಾಗಿದೆ. ರಾಜ್ಯ ಹಾಗೂ ಕೇಂದ್ರ ನಾಯಕರೊಡನೆ ಉತ್ತಮ ಬಾಂಧವ್ಯವಿದೆ, ಈಗಿನ ರಾಜಕೀಯ ಸನ್ನಿವೇಶದಿಂಡ ನಮ್ಮ ಸರ್ಕಾರಕ್ಕೆ ಯಾವ ಆತಂಕವಿಲ್ಲ ಎಂದಿದ್ದಾರೆ. ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅನಾರೋಗ್ಯದ ಕಾರಣ ಸಭೆಗೆ ಹಾಜಆಗಿಲ್ಲ. ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರ್ ಸಭೆಯ ಮುಂದಾಳತ್ವ ವಹಿಸಿದ್ದರು.
"ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ. ನನ್ನ ಸರ್ಕಾರವು ಸ್ಥಿರವಾಗಿದೆ. ಸರ್ಕಾರದ ಭದ್ರತೆಗೆ ಅಗತ್ಯವಾದ ಎಲ್ಲಾ ಕ್ರಮವನ್ನೂ ಣಾನು ತೆಗೆದುಕೊಂಡಿದ್ದೇನೆ. ನಿಮ್ಮ ಗಮನವನ್ನು ಪಕ್ಷದ ಪರ ಕೆಲಸ ಮಾಡುವುದರಲ್ಲಿರಿಸಿ" ಕುಮಾರಸ್ವಾಮಿ ಹೇಳಿದ್ದಾರೆ ಎಂದು ಮೂಲಗಳು ಹೇಳಿದೆ.

Advertisement

Advertisement

ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡಿದ್ದು ಕಾಂಗ್ರೆಸ್ ನಾಯಕ ಎಸ್.ಟಿ. ಸೋಮಶೇಖರ್ ತಮ್ಮ ನಾಯಕರಿಗೆ ಪತ್ರ ಬರೆದು ಗೊಂದಲದ ವಾತಾವರಣದ ಬಗೆಗೆ ವಿವರಿಸಿದ್ದಾರೆ. ಅಲ್ಲದೆ ಕುಮಾರಸ್ವಾಮಿ ಅವರ ಪಕ್ಷದ ನಾಯಕರು ಸರ್ಕಾರದ ಅಭದ್ರತೆ ಬಗೆಗೆ ಯಾವ ಆತಂಕ ಪಡಬೇಕಾಗಿಲ್ಲ ಎಂದೂ ಹೇಳಿದ್ದಾರೆ. ಹೀಗಾಗಿ ಜೆಡಿಎಸ್ ಶಾಸಕರು ಮೇ 19 ರಂದು  ನಡೆಯುವ ಚಿಂಚೋಳಿ, ಕುಂದಗೋಳ ವಿಧಾನಸಭೆ ಉಪಚುನಾವಣೆಗಳ ಮೈತ್ರಿ ಅಭ್ಯರ್ಥಿಗಳ ಗೆಲುವನ್ನು ಖಾತ್ರಿಪಡಿಸಿಕೊಳ್ಲಲು ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದ್ದಾರೆ. 
"ಕಾಂಗ್ರೆಸ್ ಶಾಸಕರು ಮತ್ತು ಮಂತ್ರಿಗಳಿಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದು ಅಭಿವೃದ್ದಿ ಕಾರ್ಯಗಳಿಗೆ ನಿಧಿಯನ್ನೂ ಒದಗಿಸಲಾಗಿದೆ.ಎಂದು ವೇಣುಗೋಪಾಲ್ ಅವರಿಗೆ ತಿಳಿಸಿದ್ದೇವೆ. ಹಾಗಾಗಿ ನಮಗೆ ನ್ಯಾಯವಾಗಿದೆ ಎಂದು ಹೇಳಲು ಯಾವ ಕಾರಣವಿಲ್ಲ. ಕಾಂಗ್ರೆಸ್ 2: 1 ಅನುಪಾತದಲ್ಲಿ ಮೇಲುಗೈ ಸಾಧಿಸುತ್ತಿದೆ ಮತ್ತು ದೂರು ನೀಡಲು ಯಾವುದೇ ಕಾರಣವಿಲ್ಲ ಎಂದು ಸಭೆಯಲ್ಲಿ ಪಕ್ಷದ ನಾಯಕ ಹೇಳಿದರು.
ಕಾಂಗ್ರೆಸ್ ಭಿನ್ನಮತೀಯ ನಾಯಕ ರಮೇಶ್ ಜಾರಕಿಹೋಳಿ ಕುರಿತಂತೆ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗಿದೆ.  ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಬಾರದೆಂಬ ಕುರಿತು ತಾವು ಜಾರಕಿಹೋಳಿ ಜತೆ ಮಾತನಾಡಿದ್ದೇನೆ.  ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳೀದ್ದಾರೆ.  
ಸಭೆಯಲ್ಲಿ ಜೆಡಿಎಸ್ ಕಛೇರಿಗಾಗಿ ಅಧಿಕಾರಿಗಳ ನೇಮಕದ ಬಗೆಗೆ ಚರ್ಚೆ ನಡೆದಿದೆ. "ನಾವು ಗುರುತಿಸಿದ ಎಲ್ಲ ಏಳು ವಲಯಗ ಕಛೇರಿ ಅಧಿಕಾರಿಗಳನ್ನು ಮೇ 7 ರಂದು ನೇಮಕ ಮಾಡಲಾಗುತ್ತದೆ. ಕರಾವಳಿ ಕರ್ನಾಟಕ, ಮುಂಬೈ-ಕರ್ನಾಟಕ, ಹೈದರಾಬಾದ್-ಕರ್ನಾಟಕ, ಕೇಂದ್ರೀಯ ಕರ್ನಾಟಕ,, ಹಳೆ ಮೈಸೂರು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶಗಳಲ್ಲಿ ನಾವು  ಕಛೇರಿ ಅಧಿಕಾರಿಗಳನ್ನು  ನೇಮಕ ಮಾಡಲಿದ್ದೇವೆ." ಟಿಎ ಶಾರವಣ, ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement