ರಾಜಕೀಯ

ಕೋಮುವಾದಿ ಬಿಜೆಪಿಗೆ ಏಕೆ ಮತ ಹಾಕುವುದು? ಜನರು ಬುದ್ಧಿವಂತರಾಗಬೇಕು: ಸಿದ್ದರಾಮಯ್ಯ 

Sumana Upadhyaya

ಹುಣಸೂರು: ಸಿಎಂ ಯಡಿಯೂರಪ್ಪನವರಿಗೆ ಮುಸಲ್ಮಾನರನ್ನು ಕಂಡರೆ ಆಗುವುದಿಲ್ಲ. ಮುಸ್ಲಿಮರ ವಿರುದ್ಧ ದ್ವೇಷದ ಭಾವನೆ ಹೊಂದಿದ್ದಾರೆ. ಮುಸ್ಲಿಂ ಧರ್ಮೀಯರನ್ನು ಅವರು ಅಷ್ಟೊಂದು ಏಕೆ ದ್ವೇಷಿಸುತ್ತಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 


ಹುಣಸೂರಿನಲ್ಲಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಕನಕದಾಸ ಜಯಂತಿ ಮತ್ತು ಕೆಂಪೇಗೌಡ ಜಯಂತಿ ಆಚರಣೆ ಆರಂಭಿಸಿದಂತೆ ಟಿಪ್ಪು ಜಯಂತಿಯನ್ನು ಕೂಡ ಪ್ರಾರಂಭಿಸಿದೆ. ಟಿಪ್ಪು ಒಬ್ಬ ರಾಜ. ಅವರು ಬ್ರಿಟಿಷರ ವಿರುದ್ಧ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಅವರ ತಂದೆ ಹೈದರಾಲಿ ಕೂಡ ದೊರೆ, ಹೀಗಿರುವಾಗ ಟಿಪ್ಪು ಜಯಂತಿ ಆಚರಿಸುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು.


ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ನಿರ್ದಿಷ್ಟವಾಗಿ ಒಂದು ಸಮುದಾಯವನ್ನೇಕೆ ದ್ವೇಷಿಸುತ್ತಿದ್ದಾರೆ? ಇದರಿಂದಲೇ ಅವರ ಕೋಮು ಭಾವನೆ ಗೊತ್ತಾಗುತ್ತದೆ. ನಾನು ಸಿಎಂ ಆಗಿದ್ದಾಗ ಹಲವು ಯೋಜನೆಗಳನ್ನು ತಂದೆ. ಅವರು ಏನು ಮಾಡಿದರು. ಜನರು ಬುದ್ಧಿವಂತರಾಗಬೇಕು. ಜನರೇಕೆ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

SCROLL FOR NEXT