ರಾಜಕೀಯ

ಗೆಲುವು ನಿರೀಕ್ಷೆಯಲ್ಲಿದ್ದೇನೆ, ಮತದಾರರ ಅಭಿಪ್ರಾಯ ಕೇಳಿ ಬಿಜೆಪಿ ಸೇರ್ಪಡೆ ಬಗ್ಗೆ ತೀರ್ಮಾನ: ಶರತ್ ಬಚ್ಚೇಗೌಡ  

Sumana Upadhyaya

ಚಿಕ್ಕಬಳ್ಳಾಪುರ:  ಈ ಬಾರಿಯ ಉಪ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿತ್ತು. ಶ್ರೀಮಂತ ಬಿಜೆಪಿ ಅಭ್ಯರ್ಥಿ ಎಂ ಟಿಬಿ ನಾಗರಾಜ್ ಮತ್ತು ಬಂಡಾಯ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ನಡುವೆ ಜಿದ್ದಾಜಿದ್ದಿನ ಕಣ.


ಉಪಚುನಾವಣೆಯ ಮತಎಣಿಕೆಯಲ್ಲಿ ಮುನ್ನಡೆ ಸಾಧಿಸಿರುವ ಶರತ್ ಬಚ್ಚೇಗೌಡ, ಮಾಧ್ಯಮಗಳಿಗೆ ಪ್ರಕ್ರಿಯಿಸಿದ ಅವರು ಕ್ಷೇತ್ರದ ಮತದಾರರ ಆಶೀರ್ವಾದ ನನಗಿದೆ. ನಮ್ಮ ತಂದೆ ಬಿಜೆಪಿಗೆ ಬರುವ ಮೊದಲಿಂದಲೂ ಕೆಲಸಗಳನ್ನು ಮಾಡಿಕೊಂಡೇ ಬಂದಿದ್ದಾರೆ. ಅವರ ಬಿಜೆಪಿಗೆ ಸೇರ್ಪಡೆಯಾದಾಗ, ಮತದಾರರು ಅವರಿಗೂ ಬೆಂಬಲ ಕೊಟ್ಟಿದ್ದರು. ನಮ್ನ ತಂದೆಯ ಕಾರ್ಯಗಳನ್ನು ಕ್ಷೇತ್ರದ ಜನತೆ‌ ನೋಡಿದ್ದಾರೆ. ಅವರ ನಾಮಬಲ ನನಗಿದೆ. ಕ್ಷೇತ್ರದ ಮತದಾರರ ಆಶೀರ್ವಾದ ನನ್ನ ಮೇಲಿದೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.


ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿ ಮೊದಲು ಗೆಲವು ನಿರೀಕ್ಷೆ ಮಾಡುತ್ತಿದ್ದೇನೆ. ಗೆದ್ದ ನಂತರ ಮತದಾರರ ಅಭಿಪ್ರಾಯ ಕೇಳಬೇಕು. ಅವರು ಸಮ್ಮತಿ ಸೂಚಿಸಿದರೆ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದರು.


ಅನರ್ಹರಿಗೆ ಟಿಕೆಟ್ ಕೊಟ್ಟ ಬಿಜೆಪಿ, ಅಂತಹ ಪಕ್ಷಕ್ಕೆ ಸೇರುತ್ತಿರಾ ಎಂಬ ಪ್ರಶ್ನೆಗೆ ಕೆಲಸ ಮಾಡೋರಿಗೆ ಟಿಕೆಟ್ ಕೊಟ್ಟಿಲ್ಲ. ಅನರ್ಹರಿಗೆ ಕೊಟ್ಟಿದ್ದಾರೆ. ಇದರ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.

SCROLL FOR NEXT