ರಾಜಕೀಯ

ಕಾಲಿಗೆ ಬಿದ್ದರೂ ಕೇರ್ ಮಾಡದ ಅನಿತಾ ಕುಮಾರಸ್ವಾಮಿ: ಕಾರಿಗೆ ಅಡ್ಡ ಹಾಕಿ ಶಾಸಕಿಗೆ ಘೇರಾವ್ 

Shilpa D

ರಾಮನಗರ: ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದರೆ ಶಾಸಕಿ ಅನಿತಾ ಕುಮಾರಸ್ವಾಮಿಯವರು ಸ್ಪಂದಿಸದ ಕಾರಣ ಜನ ಘೇರಾವ್ ಮಾಡಿದ ಪ್ರಸಂಗ ನಡೆಯಿತು. 

ರಾಮನಗರ ನಗರಸಭೆಗೆ ಆಗಮಿಸಿದ್ದ ಶಾಸಕಿ ಅನಿತಾಕುಮಾರಸ್ವಾಮಿ ಅವರ ಬಳಿ ನೂರಾರು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಂದಾದರು.

ಅರ್ಕಾವತಿ ಬಡಾವಣೆ ನಿವಾಸಿಗಳು, ಸಾರ್ವಜನಿಕ ಸ್ಥಳದಲ್ಲಿರುವ ಗ್ಯಾಸ್ ಗೋದಾಮು ತೆರವುಗೊಳಿಸಲು ಕೋರಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಗ್ಯಾಸ್ ಗೋದಾಮು ತೆರವುಗೊಳಿಸಿ ಎಂದು ಪಟ್ಟು ಹಿಡಿದರು.

ಕೆಲವರು ಕಾಲಿಗೆ ಬಿದ್ದು ತಮ್ಮ ಸಮಸ್ಯೆ ಪರಿಹರಿಸುವಂತೆ ಬೇಡಿಕೊಂಡರು. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ಶಾಸಕರು ಮುಂದೆ ನಡೆಯುತ್ತಲೇ ಹೋದರು. 

ಮನವಿಗೆ ಸ್ಪಂದಿಸದ ಶಾಸಕಿ ಅನಿತಾ ಕುಮಾರಸ್ವಾಮಿ ವರ್ತನೆಯಿಂದ ಬೇಸತ್ತ ಸಾರ್ವಜನಿಕರು ಕಾರಿಗೆ ಅಡ್ಡಲಾಗಿ ಕುಳಿತು ಪ್ರತಿಭಟನೆ ಮಾಡಲು ಮುಂದಾದಾಗ, ಜೆಡಿಎಸ್ ಮುಖಂಡರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು ಉದ್ವಿಗ್ನ ವಾತಾವರಣ ನಿರ್ವಣವಾಯಿತು.

ಕಾರಿಗೆ ಅಡ್ಡ ಕುಳಿತಿದ್ದನ್ನು ನೋಡಿ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್ ತೆರವಿಗೆ ಮುಂದಾದಾಗ ಜಗಳ ಏರ್ಪಟ್ಟಿದೆ. ಸಮಸ್ಯೆ ಹೇಳಿಕೊಳ್ಳಲು ಬಂದ ವ್ಯಕ್ತಿಯ ಮೇಲೆ ಶಾಸಕಿ ಎದುರೇ ಜೆಡಿಎಸ್ ಮುಖಂಡ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.

SCROLL FOR NEXT