ಎಸ್.ಟಿ ಸೋಮಶೇಖರ್ 
ರಾಜಕೀಯ

ಸೋತವರನ್ನು ಕೈ ಬಿಡಬೇಡಿ: ಮುಖ್ಯಮಂತ್ರಿಗೆ ಸೋಮಶೇಖರ್ ಮನವಿ

ಉಪಚುನಾವಣೆಯಲ್ಲಿ ಸೋತಿರುವವರನ್ನು ಕೈಬಿಡದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿರುವುದಾಗಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಒತ್ತಾಯಿಸಿದ್ದಾರೆ.

ತುಮಕೂರು: ಉಪಚುನಾವಣೆಯಲ್ಲಿ ಸೋತಿರುವವರನ್ನು ಕೈಬಿಡದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿರುವುದಾಗಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಒತ್ತಾಯಿಸಿದ್ದಾರೆ.

ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆಗೆ ನಮಸ್ಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ತ್ಯಾಗ ಮಾಡಿರುವವರನ್ನು, ಕೈಬಿಡದಂತೆ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದು, ಪಕ್ಷದ ವರಿಷ್ಠರೊಂದಿಗೆ ಚರ್ಚಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.

ಸುಪ್ರೀಂಕೋರ್ಟ್ ಆದೇಶದಂತೆ ಸೋತಿರುವವರು ಚುನಾವಣೆಯಲ್ಲಿ ಗೆಲ್ಲಬೇಕೆಂಬ ಅನಿವಾರ್ಯತೆ ಇರುವುದರಿಂದ, ಸೋತಿರುವವರನ್ನು ವಿಧಾನಪರಿಷತ್ ಗೆ ಆಯ್ಕೆ ಮಾಡುವ ಬಗ್ಗೆ ವರಿಷ್ಠರೊಂದಿಗೆ ಮಾತನಾಡುವುದಾಗಿ ಬಿಎಸ್ ವೈ ತಿಳಿಸಿದ್ದಾರೆ ಎಂದರು.

ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಎಸ್.ಟಿ.ಸೋಮಶೇಖರ್, ಮುಖ್ಯಮಂತ್ರಿ ಬಳಿ ಇದುವರೆಗೂ ಮಂತ್ರಿಗಿರಿಯನ್ನು ಕೇಳಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಮಾತ್ರ ಕೇಳಿದ್ದೇನೆ ಎಂದರು.

ಉಪಚುನಾವಣೆಯಲ್ಲಿ ನನ್ನ ಪರ ಎರಡು ಮೂರು ಬಾರಿ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದನೆ ಸಲ್ಲಿಸುವುದಕ್ಕಾಗಿ ಎಲ್ಲರೂ ಒಟ್ಟಿಗೆ ಹೋಗಿದ್ದೇವೆಯೆ ಹೊರತು ಬೇರೆ ಇನ್ಯಾವುದೋ ವಿಚಾರಗಳ ಬಗ್ಗೆ ಚರ್ಚಿಸಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮ ಕಡೆಯಿಂದ ವೈಮಾನಿಕ ದಾಳಿ ಇರುವುದಿಲ್ಲ: 5 ವರ್ಷಗಳಲ್ಲಿ ಮೊದಲ ಬಾರಿಗೆ ಕದನ ವಿರಾಮ ಪ್ರಸ್ತಾಪಿಸಿದ ಯುಕ್ರೇನ್ ಅಧ್ಯಕ್ಷ Zelensky

ಡ್ರಗ್ಸ್ ಸೇವನೆ ದೃಢ: ಫುಕೆಟ್- ದೆಹಲಿ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್ ವಜಾ!

Video: 'ಪೊಲೀಸರು ಬುದ್ದಿ ಕಲಿಸಿದ್ದಾರೆ, ತಪ್ಪನ್ನ ಕ್ಷಮಿಸಲ್ಲ'; ಮಗ ಸಾಮ್ರಾಟ್‌ ಬಗ್ಗೆ ಕೊನೆಗೂ ಮೌನ ಮುರಿದ ನಟ Duniya Vijay

‘ಹೂತುಹಾಕಬೇಕು ಎನ್ನುವವರಲ್ಲ ನಾವು’.. ‘ಮಹಿಳೆಯರಿಗೆ ಶಿಕ್ಷಣ, ಅವಕಾಶ ನೀಡುತ್ತಿದ್ದೇವೆ’: ‘ಮನೆಯಲ್ಲೇ ಇರಬೇಕು’ ಹೇಳಿಕೆಗೆ ಮುಸ್ಲಿಂ ಧರ್ಮಗುರು ಸ್ಪಷ್ಟನೆ, Video

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!