ರಾಜಕೀಯ

ಸರ್ಕಾರ ರಚನೆಗೆ ಬಿಜೆಪಿ ತಂತ್ರಗಾರಿಕೆ: ಆದರೂ, ಲೆಕ್ಕಾಚಾರದಲ್ಲಿ ಇನ್ನೂ ಕಳವಳ

Nagaraja AB

ಬೆಂಗಳೂರು: ಬಜೆಟ್ ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿ ಮೊದಲ ದಿನದ ಯಶಸ್ಸಿನಿಂದ ಉತ್ತೇಜಿತರಾಗಿರುವ ಬಿಜೆಪಿ ನಾಯಕರು ಮುಂದಿನ ನಡೆ ಬಗ್ಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಆದರೆ, ಶಾಸಕರ ಸಂಖ್ಯೆಯಲ್ಲಿ ಇನ್ನೂ ಕಳವಳವಿದೆ.

 ಮೈತ್ರಿ ಸರ್ಕಾರದ 9 ಶಾಸಕರು  ಮೊದಲ ದಿನ ಕಲಾಪಕ್ಕೆ ಗೈರಾಗಿದ್ದರಿಂದ  ಆರು ಬಿಜೆಪಿ ಶಾಸಕರು ಗೈರಾದ ಬಗ್ಗೆ ಬಿಜೆಪಿ ಅಷ್ಟೇನೂ ತಲೆ ಕೆಡೆಸಿಕೊಂಡಿಲ್ಲ, ಮೈತ್ರಿ ಪಕ್ಷಗಳು ಅಗತ್ಯವಿರುವಷ್ಟು ಶಾಸಕರು ನಮ್ಮ ಬಳಿ ಇದ್ದಾರೆ ಎಂದು ಹೇಳುತ್ತಿದ್ದರೆ, ಮುಂದೆ ಏನಾದರೂ ನಡೆಯಬಹುದೆಂದು ಪ್ರತಿಪಕ್ಷ ಬಿಜೆಪಿ ಶಾಸಕರು ಹೇಳುತ್ತಿದ್ದಾರೆ.

ಮುಖ್ಯಮಂತ್ರಿ ಬಗ್ಗೆ ಶಾಸಕರು ನಂಬಿಕೆ ಕಳೆದುಕೊಂಡಿದ್ದು, ಸರ್ಕಾರ ಅಲ್ಪಮತಕ್ಕೆ ಕುಸಿದಿದೆ . ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಶ್ರೀರಾಮುಲು ಹೇಳಿದ್ದಾರೆ. ಆದಾಗ್ಯೂ, ನಾವು ಬಹುಮತ ಹೊಂದಿಲ್ಲದ ಕಾರಣ ಪ್ರತಿಭಟನೆ ಮಾಡುತ್ತಿದ್ದೇವೆ, ರಾಜ್ಯಪಾಲರ ಗಮನಕ್ಕೆ ತರುತ್ತೇವೆ , ಆದರೆ, ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪೂರ್ವ ನಿಯೋಜಿತ ಕೆಲಸದಿಂದಾಗಿ ಬಿಜೆಪಿಯ ಕೆಲ ಶಾಸಕರು ಮೊದಲ ದಿನ ಕಲಾಪದಿಂದ ದೂರ ಉಳಿದಿದ್ದು, ಗೈರಾದವರ ಶಾಸಕರ ಪಟ್ಟಿಯನ್ನು ಹಿರಿಯ ಬಿಜೆಪಿ ನಾಯಕರು ಸಿದ್ಧಪಡಿಸಿದ್ದಾರೆ ಎಂದು ಅನೇಕ ಬಿಜೆಪಿ ನಾಯಕರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಲ್ವರು ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ  ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೋಹ ಹರಡಿದ್ದು, ಸಮ್ಮಿಶ್ರ ಸರ್ಕಾರದಲ್ಲಿನ ಆರಕ್ಕೂ ಹೆಚ್ಚಿನ ಶಾಸಕರನ್ನು ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ತಂತ್ರಗಾರಿಕೆ ರೂಪಿಸುತ್ತಿದೆ. ಇದಕ್ಕಾಗಿ ಬಿಜೆಪಿ ಕಾಯುತ್ತಿದೆ.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಜೆಟ್ ಮಂಡಿಸಿದ ನಂತರ ಸರ್ಕಾರ ಪತನಗೊಳಿಸುವ ಯೋಜನೆ ನಡೆದಿದೆ ಎಂಬಂತಹ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
SCROLL FOR NEXT