ರಾಜಕೀಯ

ಆಡಿಯೋ ಟೇಪ್ ತಪ್ಪೊಪ್ಪಿಗೆ: ವೇದಿಕೆ ಮೇಲಿದ್ದ ಯಡಿಯೂರಪ್ಪ ಕಡೆ ಪಿಎಂ ಮೋದಿ ತಿರುಗಿಯೂ ನೋಡಲಿಲ್ಲ

Shilpa D
ಬೆಂಗಳೂರು: ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಎರಡೂ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿಲ್ಲ..
ಶಾಸಕರ ಪುತ್ರನೊಬ್ಬನ ಜೊತೆ ಯಡಿಯೂರಪ್ಪ ಡೀಲ್ ಮಾಡಿದ್ದಾರೆ ಎಂಬ ಆಡಿಯೋ ಟೇಪ್ ಹಾಗೂ ಅದರಲ್ಲಿ ಮಾತನಾಡಿದ್ದು ನಾನೇ ಎಂದು ಬಿಎಸ್ ವೈ ತಪ್ಪೊಪ್ಪಿಕೊಂಡಿದ್ದಾರೆ, ಆದರೆ ಈ ವಿಷಯವಾಗಿ ಮೋದಿ ಯಡಿಯೂರಪ್ಪ ಜೊತೆ ಚರ್ಚಿಸಿಲ್ಲ,
ಪ್ರಧಾನಿ ನರೇಂದ್ರ ಮೋದಿ ಅವರು ಧಾರವಾಡದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಅಲ್ಲಿಂದ ನಿರ್ಗಮಿಸಿದ ಅವರು, ತಮ್ಮ ಹಿಂದೆ ಕುಳಿತಿದ್ದ ಶಾಸಕ ಅಮೃತ್ ದೇಸಾಯಿ, ಸೇರಿದಂತೆ ಕೆಲವು ನಾಯಕರಿಗೆ ಧನ್ಯವಾದ ತಿಳಿಸಿದರು.
 ಬಿ.ಎಸ್.ಯಡಿಯೂರಪ್ಪ ಕೈ ಮುಗಿದುಕೊಂಡು ನಿಂತಿದ್ದರೂ ಅದನ್ನು ನೋಡದೇ, ಅಲ್ಲಿಂದ ಸ್ವಲ್ಪ ಮುಂದೆ ಬಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ಕೈಮುಗಿದು ನಮಸ್ಕರಿಸಿ ವೇದಿಕೆಯಿಂದ ನಿರ್ಗಮಿಸಿದರು.
ಯಡಿಯೂರಪ್ಪ ಅವರು ಆಡಿಯೋ ಪ್ರಕರಣದ ನಂತರ ತಪ್ಪೊಪ್ಪಿಕೊಂಡ ನಂತರ ಬಿಎಸ್ ವೈ ಮೇಲೆ ಮೋದಿ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಯಡಿಯೂರಪ್ಪ ಮಾಡಿರುವ ಅವಾಂತರದಿಂದಾಗಿ ಪಕ್ಷ ಮುಜುಗೊರಕ್ಕೊಳಗಾಗುವಂತಾಗಿದೆ, ಹೀಗಾಗಿ ಮೋದಿ ಯಡಿಯೂರಪ್ಪ ಅವರ ಜೊತೆ ಮಾತನಾಡಲಿಲ್ಲ ಎಂದು ಹೇಳಲಾಗುತ್ತಿದೆ.
ಧಾರವಾಡದಿಂದ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಸಮೀಪ ಕೆಎಲ್‍ಇ ಮೈದಾನದ ಸಮಾವೇಶದಲ್ಲಿ ತಮ್ಮ ಪಕ್ಕದಲ್ಲೇ ಬಿ.ಎಸ್.ಯಡಿಯೂರಪ್ಪ ಕುಳಿತಿದ್ದರೂ ಪ್ರಧಾನಿ ಮೋದಿ ಮಾತನಾಡಲಿಲ್ಲ. ಹಾರ  ಮತ್ತು ಮೈಸೂರು ಪೇಟ ಹಾಕುವ ವೇಳೆ ಥ್ಯಾಂಕ್ಸ್ ಮಾತ್ರ ಹೇಳಿದರು. ಭಾಷಣದ ವೇಳೆಯೂ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಕಡೆಗಣನೆ ಮಾಡಿದರು.
ಈ ಎಲ್ಲ ಬೆಳವಣಿಗೆಗಳಿಂದ ಬಿ.ಎಸ್.ಯಡಿಯೂರಪ್ಪ ಅವರು ಸೈಡ್‍ಲೈನ್ ಆದರೆ ಎನ್ನುವುದು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
SCROLL FOR NEXT