ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ 
ರಾಜಕೀಯ

ಜೆಡಿಎಸ್ ಪಕ್ಷವನ್ನು ಬಲಗೊಳಿಸಿ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ನನ್ನ ಗುರಿ: ಎಚ್ ಡಿ ದೇವೇಗೌಡ

: ನನ್ನ ವಯಸ್ಸಿನ ಕಾರಣದಿಂದಾಗಿ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ನನಗೆ ಯಾವುದೇ ರಾಜಕೀಯ ಆಕಾಂಕ್ಷೆಗಳಿಲ್ಲ,...

ಬೆಂಗಳೂರು: ನನ್ನ ವಯಸ್ಸಿನ ಕಾರಣದಿಂದಾಗಿ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ನನಗೆ ಯಾವುದೇ ರಾಜಕೀಯ ಆಕಾಂಕ್ಷೆಗಳಿಲ್ಲ, ನಾನು ಪ್ರಧಾನಿ ಹುದ್ದೆ ರೇಸ್ ನಲ್ಲಿಯೂ ಇಲ್ಲ, ಜೆಡಿಎಸ್ ಪಕ್ಷವನ್ನು ಬಲಗೊಳಿಸಿ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ನನ್ನ ಗುರಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರ: ಸಮ್ಮಿಶ್ರ ಸರ್ಕಾರ ಮತ್ತು ಅದರ ಸ್ಥಿರತೆ ಬಗ್ಗೆ ನಿಮ್ಮ ಆಲೋಚನೆ ಏನು?
ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಲವು ವರ್ಷಗಳಿಂದ ಬಿನ್ನಾಭಿಪ್ರಾಯಗಳಿವೆ, ಹೀಗಿದ್ದರೂ ನಾವು ಒಟ್ಟಾಗಿ ಸರ್ಕಾರ ರಚಿಸಿದ್ದೇವೆ, ವಿಧಾನಸಭೆ ಚುನಾವಣೆ ನಂತರ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್ ನಿರ್ಧರಿಸಿತು, ಐದು ವರ್ಷಗಳ ಸಮಯಲ್ಲೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಸದ್ಯ ಏನಾಗುತ್ತಿದೆ ಎಂಬುದನ್ನು ಇಡೀ ರಾಜ್ಯವೇ ನೋಡುತ್ತಿದೆ, ಸರ್ಕಾರದಗ ಸ್ಥಿರತೆ ಕಾಂಗ್ರೆಸ್ ಮೇಲೆ ಅವಲಂಬಿತವಾಗಿದೆ.
ಪ್ರ: ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವ ಮುನ್ನ ಕಾಂಗ್ರೆಸ್ ನಿಮ್ಮನ್ನು ಸಂಪರ್ಕಿಸಿತ್ತೇ?
ಮಂಡಳಿಗಳಿಗೆ ತಾತ್ಕಾಲಿಕವಾಗಿ ಹೆಸರುಗಳ ಬಗ್ಗೆ ಚರ್ಚಿಸಲಾಗಿತ್ತು, ಅವರು ಮಂಡಳಿಗಳಿಗೆ ಹೆಸರುಗಳನ್ನು ಘೋಷಿಸಿದರು, ಬಜೆಟ್ ನಲ್ಲಿ 16 ಸಾವಿರ ಕೋಟಿ ಅನುದಾನ ಸಿಗುವ ಮಂಡಳಿಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿತ್ತು,. ನಮಗೆ ಕೇವಲ ಮೂರು ಸಾವಿರ ಕೋಟಿ ಅನುದಾನ ಸಿಗುವ ಮಂಡಳಿಗಳನ್ನು ನೀಡಿತ್ತು, ಹೀಗಾಗಿ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸುವ ಮುನ್ನ ಪಟ್ಟಿಯನ್ನು ತಿಳಿಸುವಂತೆ ನಾನು ಹೇಳಿದ್ದೆ, ಅದಾದ ನಂತರ ಯಾವುದೇ ಚರ್ಚೆ ನಡೆಯಲಿಲ್ಲ,
ಪ್ರ: ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರ ನೇಮಕ ವಿವಾದ ಏಕೆ?
ನ್ಯಾಯಾಲಯದ ಆದೇಶದಂತೆ ಶಾಸಕರೊಬ್ಬರನ್ನು ಮಂಡಳಿಗಳಿಗೆ ನೇಮಿಸಬಾರದು, ಅವರ ಉದ್ದೇಶ ಏನಾದರೂ ಆಗಿರಲಿ, ಆದರೆ ಮುಖ್ಯಮಂತ್ರಿಗಳು ಅಂತವರನ್ನು ನೇಮಕ ಮಾಡುವುದಿಲ್ಲ.
ಪ್ರ: ಜೆಡಿಎಸ್ ಉದ್ದೇಶಪೂರ್ವಕವಾಗಿ ಶಾಸಕರ ಹೆಸರನ್ನು ತಡೆಹಿಡಿದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ, ಇದರಿಂದ ನಿಮಗೆ ಬೇಸರವಾಗಿದೆಯೇ?
ಕಳೆದ 12 ವರ್ಷಗಳಿಂದ ನಾನು ಅನೇಕ ಅಪಮಾನಗಳನ್ನು ಎದುರಿಸಿದ್ದೇನೆ, ಹೀಗಾಗಿ ನನ್ನ ಚರ್ಮ ದಪ್ಪವಾಗಿ ಹೋಗಿದೆ.
ಪ್ರ: ಕಾಂಗ್ರೆಸ್ ನಿಮಗೆ 12 ಲೋಕಸಭೆ ಕ್ಷೇತ್ರಗಳನ್ನು ಬಿಟ್ಟುಕೊಡಲಿದೆಯೇ?
ಸರ್ಕಾರ ರಚಿಸುವಂತೆ ಕಾಂಗ್ರೆಸ್ ಗೆ ದೆಹಲಿಯಿಂದ ಆದೇಶ ಬಂದ ನಂತರ ಅಧಿಕಾರ ಹಂಚಿಕೆ ಸಂಬಂಧ ಅವರು  ಯಾವುದೇ ತಗಾದೆ ತೆಗೆಯಲಿಲ್ಲ, ನನ್ನ ಮಗ ನನಗೆ ವಿರೋಧವಾಗಿ ಬಿಜೆಪಿ ಜೊತೆ ಸರ್ಕಾರ ರಚಿಸಿದಾಗ 50:50 ಅಧಿಕಾರ ಹಂಚಿಕೆ ಸೂತ್ರಕ್ಕೆ ಬದ್ದನಾಗಿದ್ದ.ಆದರೆ ಈ ಬಾರಿ 2:1 ಸೂತ್ರ ಅಳವಡಿಸಿಕೊಳ್ಳಲಾಗಿದೆ, ಹೀಗಾಗಿ ನಾನು ಕೂಡ ನನ್ನ ನಿಲುವಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇನೆ.
ಪ್ರ: ನೀವು ಏಕೆ 7 ಅಥವಾ 8 ಸೀಟುಗಳನ್ನು ತೆಗೆದುಕೊಳ್ಳುತ್ತಿಲ್ಲ?
ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಜೆಡಿಎಸ್ 10 ಸೀಟುಗಳನ್ನು ಗೆಲ್ಲಬಹುದು ಎಂದು ಹೇಳಿದ್ದಾರೆ, ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ, ನಾನು 12 ಸೀಟು ಕೇಳಿದ್ದೇನೆ, ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಜೊತೆ ಈ ಬಗ್ಗೆ ಚರ್ಚಿಸಲಾಗುವುದು.
ಪ್ರ: ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವುದು ನಿಮ್ಮ  ಸ್ವಂತ ಆಯ್ಕೆಯೇ?
ಅಂತಹ ಪರಿಸ್ಥಿತಿಗಳು ಎದುರಾಗುವ ಪ್ರಶ್ನೆಯೇ ಇಲ್ಲ, ನನ್ನ ಬೇಡಿಕೆಗೆ ನಾನು ಅಂಟಿಕೊಂಡು ಕೂತಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವುದಷ್ಟೇ ಕಾಂಗ್ರೆಸ್ ಮತ್ತು ಜೆಡಿಎಸ್ ಗುರಿ.
ಪ್ರ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತೀರಾ?
ನನಗೀಗ 86 ವರ್ಷ. ಹೀಗಾಗಿ ನಾನು ಸ್ಪರ್ಧಿಸುತ್ತಿಲ್ಲ, ಆದರೆ ನನ್ನ ಕ್ಷೇತ್ರಕ್ಕೆ ಏನಾದರೊಂದು ಮಾಡಬೇಕು ಎಂಬ ಆಸೆಯಿದೆ, ಹೀಗಾಗಿ ಹಾಸನ ಕ್ಷೇತ್ರಕ್ಕೆ ನನ್ನ ಮೊಮ್ಮಗನ ಹೆಸರನ್ನು ಘೋಷಿಸಿದ್ದೇನೆಸ, ಆದರೆ ಕೆಲವು ಮುಖಂಡರು ನಾನೇ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ, ಆದರೆ ಈ ಬಗ್ಗೆ ನಾನು ಇನ್ನೂ ನಿರ್ಧರಿಸಿಲ್ಲ.
ಪ್ರ: ಜೆಡಿಎಸ್ ಕುಟುಂಬದ ಪಕ್ಷವಾಗುತ್ತಿದೆ ಎಂಬ ಆರೋಪವಿದೆಯಲ್ಲ?
ಈ ಪಕ್ಷದಲ್ಲಿದ್ದುಕೊಂಡು ಬೆಳೆದು ಮುಂದೆ ಹೋದವರು ಗೌಡ ಯಾರೋಬ್ಬರನ್ನು ಬೆಳೆಯಲು ಬಿಡುವುದಿಲ್ಲ, ಎಂದು ಹೇಳಿದವರೇ ಜೆಡಿಎಸ್ ಕುಟುಂಬ ಪಕ್ಷ ಎನ್ನುತ್ತಾರೆ, ಜೊತೆಗೆ ಜಾತಿ ಆಧಾರದ ಪಕ್ಷ. ಎಂದೆಲ್ಲಾ ಹೇಳುತ್ತಾರೆ, ಜೆಡಿಎಸ್ ಮುಳುಗಲು ನಾನು ಬಿಡುವುದಿಲ್ಲ, ನಾನು ಮತ್ತಷ್ಟು ಹಾರ್ಡ್ ವರ್ಕ್ ಮಾಡುತ್ತೇನೆ, ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಯೋಜಿಸಿದ್ದೇನೆ, ಜಾತ್ಯಾತೀತ ಶಕ್ತಿಗಳೆಲ್ಲಾ ಒಗ್ಗೂಡಿ ಬಿಜೆಪಿಯನ್ನು ಅಧಿಕಾರದಿದಂ ದೂರ ಇರಿಸುವುದೇ ನಮ್ಮ ಗುರಿ.
ಪ್ರ: ಮಹಾಘಟ್ ಬಂಧನ್ ಮೋದಿ ಅವರನ್ನು ಅಧಿಕಾರದಿಂದ ದೂರ ಇಡುವುದೇ? 
ನಮ್ಮ ಪ್ರಮುಖ ಅಜೆಂಡಾ ನೋಟು ಅಮಾನ್ಯೀಕರಣ ಸೇರಿದಂತೆ ಮೋದಿ ಕೈಗೊಂಡ ಎಲ್ಲಾ ನಿರ್ಧಾರಗಳ ವಿಫಲವಾಗಿವೆ. ಹೀಗಾಗಿ ಬಿಜೆಪಿಗೆ ಬಹುಮತ ದೊರಕುವುದು ಕಷ್ಟ.
ಪ್ರ: ನೀವು ಪ್ರಧಾನ ಮಂತ್ರಿ ಹುದ್ದೆ ರೇಸ್ ನಲ್ಲಿದ್ದಿರಾ?
ನನಗೆ ಯಾವುದೇ ರೀತಿಯ ರಾಜಕೀಯ ಆಸೆ-ಆಕಾಂಕ್ಷೆಗಳಿಲ್ಲ., ನನ್ನ ಪಕ್ಷ ಬೆಳೆಯುವುದಷ್ಟೆ ನನಗೆ ಮುಖ್ಯ, 545 ಮಂದಿ ಇರುವ ಮನೆಯಲ್ಲಿ ಕೇವಲ ಐದು ಅಥವಾ ಆರೋ ಸೀಟು ಪಡೆದ ನಾನ್ಯಾವ ಲೆಕ್ಕ? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT