ರಾಜಕೀಯ

ಬಿಎಸ್ಪಿ,ಎಸ್ಪಿ ಮೈತ್ರಿಯಿಂದ ಕರ್ನಾಟಕದಲ್ಲಿ ಒತ್ತಡದಲ್ಲಿ ಕಾಂಗ್ರೆಸ್?

Nagaraja AB
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಬಿಸ್ಪಿ ಹಾಗೂ ಎಸ್ಪಿ ಮೈತ್ರಿಯಿಂದಾಗಿ ಕರ್ನಾಟಕದಲ್ಲಿ  ಕಾಂಗ್ರೆಸ್  ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ಸೀಟು ಹಂಚಿಕೆ ಸಂಬಂಧ  ಕೆಲ ದಿನಗಳಲ್ಲಿ ಪಕ್ಷದ ನಾಯಕರು ಮಾತುಕತೆ ನಡೆಸಲಿದ್ದು, ಮೈತ್ರಿ ಪಕ್ಷ ಜೆಡಿಎಸ್ 12 ಸ್ಥಾನಗಳಿಗೆ ಬೇಡಿಕೆ ಇಡುತ್ತಿದೆ. 9 ಅಥವಾ 10 ಸ್ಥಾನಗಳಿಗೆ ಅಂತಿಮವಾಗುವ ಸಾಧ್ಯತೆ ಇದೆ.
ಬಿಎಸ್ಪಿ ಎಸ್ಪಿ, ಆತುರದ ನಿರ್ಧಾರ ಕೈಗೊಂಡಿವೆ. ಇತರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. 
ಎಲ್ಲಾ ಸಮನ ಮನಸ್ಕ ಪಕ್ಷಗಳು ಬಿಡೆಪಿ ಹಾಗೂ ಆರ್ ಎಎಸ್ ಸರ್ವಾಧಿಕಾರಿ ವರ್ತನೆ ವಿರುದ್ಧ ಹೋರಾಡಬೇಕಿದೆ. ಮೋದಿ   ಅವರ ಸುಳ್ಳನ್ನು ಒಪ್ಪದೇ ಇರುವವರ ವಿರುದ್ದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಂದು ರಕ್ಷಣೆ ಇಲ್ಲದಂತಾಗಿದೆ. ಸಮಾನ ಮನಸ್ಕ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಒಳ್ಳೆಯದು ಎಂದು ಖರ್ಗೆ ಹೇಳಿದ್ದಾರೆ
SCROLL FOR NEXT