ರಾಜಕೀಯ

ಪಾಟೀಲ್ ಒಬ್ಬ 'ಮಂಗ', ಆತನಿಗೆ ಏನೂ ಗೊತ್ತಿಲ್ಲ: ಶಾಮನೂರು ಶಿವಶಂಕರಪ್ಪ-ಎಂಬಿಪಿ ವಾಕ್ಸಮರ

Shilpa D
ದಾವಣಗೆರೆ: ಕಾಂಗ್ರೆಸ್‌ನೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಬಯಲಾಗುತ್ತಿದೆ. ಕಾಂಗ್ರೆಸ್ ನಾಯಕರಾದ ಎಂ. ಬಿ.ಪಾಟೀಲ್ ಹಾಗೂ ಶಾಮನೂರು ಶಿವಶಂಕರಪ್ಪ ಪರಸ್ಪರ ಕಿತ್ತಾಡಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. 
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ  ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ್‌ ನಡುವೆ ತೀವ್ರ ತರದಲ್ಲಿ ನಿರಂತರ ವಾಕ್ಸಮರ ನಡೆಯುತ್ತಿದೆ. ನಾನು ಬೆಳೆದು ಬಂದಿರೋದು ಅವನಿಗೇನು ಗೊತ್ತು,  ಎಂ.ಬಿ ಪಾಟೀಲ್ ಒಬ್ಬ ಮಂಗ, ಅವನು ಇನ್ನು ಸಣ್ಣ ಹುಡುಗ. ಆತನಿಗೆ ಏನು ಗೊತ್ತಿಲ್ಲ, ನಾನು ಎಲ್ಲೂ ಎಂ.ಬಿ ಪಾಟೀಲ್ ಹೆಸರು ಬಳಸಿಲ್ಲ. ಅವನ ಬಗ್ಗೆ ಏನಾದ್ರು ಮಾತನಾಡುತ್ತೀನಾ? ಜನ ಮಾತನಾಡುವುದನ್ನು ನಾನು ಹೇಳಿದ್ದೇನೆ ಎಂದು ಶಾಮನೂರು ಶಿವಶಂಕರಪ್ಪ ಟೀಕಿಸಿದ್ದಾರೆ.
ಇನ್ನೂ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂ. ಬಿ ಪಾಟೀಲ್, ಶಾಮನೂರು ಶಿವಶಂಕರಪ್ಪ ಅವರನ್ನು ಬಹಳ ವರ್ಷಗಳಿಂದ ನೋಡಿದ್ದೀನಿ. ಅವರ ಮನಸ್ಸು ಮತ್ತು ಹೃದಯ ಸಂಕುಚಿತವಾದುದ್ದು ಕೀಳು ಮಟ್ಟದ್ದು, ತಾವಾಯ್ತು ತಮ್ಮ ಕುಟುಂಬ ಸ್ವಾರ್ಥಿ, ವಯಸ್ಸಿನಲ್ಲಿ ಹಿರಿಯವರು ಹಣದಲ್ಲಿ ಹಿರಿಯರಿರಬಹುದು. ಅವರಿಗೆ ನನ್ನ ಬೆಳವಣಿಗೆ ನೋಡಿ ಅಸೂಯೆ ನನ್ನ ಮಗ ಮಂತ್ರಿ ಆಗಬೇಕು, ನಾವೇ ಶ್ರೇಷ್ಠ ಎಂಬ ಭ್ರಮೆಯಲ್ಲಿ ಬದುಕುತ್ತಿರುವ ವ್ಯಕ್ತಿ , ಬೇರೆಯವರ ಬಿ ಫಾರಂ ಹರಿದು ಹಾಕಿ ಅಧಿಕಾರಕ್ಕೆ ಬಂದವರು ಎಂದು ಶಾಮನೂರು ಶಿವಶಂಕರಪ್ಪ ವಿರುದ್ಧ  ಕಿಡಿ ಕಾರಿದರು. 
SCROLL FOR NEXT