ಎಚ್.ಡಿ ರೇವಣ್ಣ ಮತ್ತು ಪ್ರೀತಮ್ ಗೌಡ 
ರಾಜಕೀಯ

ಹಾಸನ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಚ್.ಡಿ ರೇವಣ್ಣ- ಪ್ರೀತಮ್ ಗೌಡ ಮಾತಿನ ಚಕಮಕಿ

ರಸ್ತೆ ಅಗಲೀಕರಣದ ವೇಳೆ ಕೆಲವು ಕಟ್ಟಡಗಳನ್ನು ಒಡೆದಿರುವುದಕ್ಕೆ ಶಾಸಕ ಪ್ರೀತಮ್ ಗೌಡ ಮತ್ತು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ...

ಹಾಸನ : ರಸ್ತೆ ಅಗಲೀಕರಣದ ವೇಳೆ ಕೆಲವು ಕಟ್ಟಡಗಳನ್ನು ಒಡೆದಿರುವುದಕ್ಕೆ ಶಾಸಕ ಪ್ರೀತಮ್ ಗೌಡ ಮತ್ತು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ನಡುವೆ ಗಣ ರಾಜ್ಯೋತ್ಸವ ವೇದಿಕೆಯಲ್ಲೇ ಮಾತಿನ ಚಕಮಕಿ ನಡೆದಿದೆ.
ಕಾರ್ಯಕ್ರಮದ ನಡುವೆ ರೇವಣ್ಣ ಅವರ ಬಳಿ  ಪ್ರೀತಮ್ ಗೌಡ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿಗೆ ಸಂಬಂಧಪಟ್ಟಂತೆ ಮಾತುಕತೆ ಆರಂಭಿಸಿದರು. ಬಿಜೆಪಿ ಬೆಂಬಲಿಗರ ಕಟ್ಟಡಗಳಲ್ಲಿ ಹೆಚ್ಚಾಗಿ ಒಡೆದು ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಪ್ರೀತಮ್ ಗೌಡ ತೀವ್ರ ಅಸಮಾಧಾನಗೊಂಡಿದ್ದರು. ತಾವು ಊರಿನಲ್ಲಿ ಇಲ್ಲದ ವೇಳೆಯಲ್ಲಿ ಕಾರ್ಯಾಚರಣೆ ನಡೆಸಿ ಬಿಜೆಪಿ ಬೆಂಬಲಿಗರ ಕಟ್ಟಡಗಳನ್ನು ಒಡೆದಿದ್ದಕ್ಕಾಗಿ ಪ್ರೀತಮ್ ಗೌಡ, ರೇವಣ್ಣ ಅವರ ಜೊತೆ ವಾಗ್ವಾದಕ್ಕೆ ಮುಂದಾದರು.
ಆದರೆ ಇದಕ್ಕೂ,ತಮಗೂ ಸಂಬಂಧವಿಲ್ಲ.  ಹೈಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿ ಅವರು ರೋಹಿಣಿ ಸಿಂಧೂರಿ ಕಾರ್ಯಾಚರಣೆ ನಡೆಸಿದ್ದಾರೆ. ನೀವು ಅವರ ಬಳಿ ಮಾತನಾಡಿ ಎಂದು ರೇವಣ್ಣ ಸ್ಪಷ್ಟನೆ ನೀಡಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ.
ನಂತರ ವಿಧಾನಸಭೆಯಲ್ಲಿ ರೇವಣ್ಣ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಪ್ರೀತಮ್ ಗೌಡ ಹೇಳಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ವಿಧಾನಸಭೆಯಲ್ಲಿ ಉತ್ತರಿಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT