ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ
ಮೈಸೂರು: ನಮ್ಮ ಶಾಸಕರನ್ನು ನಾವೇ ಕಂಟ್ರೋಲ್ ಮಾಡೋದು.. ಇನ್ನೇನು ಜೆಡಿಎಸ್ ಪಕ್ಷ ಮಾಡಲು ಸಾಧ್ಯವೇ...? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರ ಸಿದ್ದರಾಮಯ್ಯ ಅವರೇ ನಮ್ಮ ಸಿಎಂ ಹೇಳಿಕೆ, ಗರಂ ಆಗಿದ್ದ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು,'ನಾವೇ ಮೈತ್ರಿ ಸರ್ಕಾರ ರಚಿಸಿದ್ದೇವೆ. ಜೆಡಿಎಸ್ ನವರೇ ಸಿಎಂ ಆಗಲೀ ಎಂದು ಹೇಳಿ ಅದರಂತೆ ನಡೆದುಕೊಂಡಿದ್ದೇವೆ. ಇನ್ನು ನಾನು ಸಿಎಂ ಆಗೋ ಪ್ರಶ್ನೆ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ್ದಾರೆ.
'ನನಗೆ ಸಿಎಂ ಎಚ್ಡಿ ಕುಮಾರಸ್ವಾಮಿಯವರ ರಾಜೀನಾಮೆ ವಿಚಾರ ಗೊತ್ತಿಲ್ಲ. ನಾನು ಈ ಬಗ್ಗೆ ಚರ್ಚೆ ಮಾಡ್ತಿನಿ. ಎಸ್.ಟಿ ಸೋಮಶೇಖರ್‌ಗೆ ಕೆಪಿಸಿಸಿಯಿಂದ ನೋಟೀಸ್ ನೀಡುವ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಎಲ್ಲರ ಜೊತೆ ಮಾತನಾಡಿ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು. ಇದೇ ವೇಳೆ 'ನಮ್ಮ ಶಾಸಕರನ್ನು ನಾವೇ ಕಂಟ್ರೋಲ್ ಮಾಡಬೇಕು. ಇನ್ನೇನು ಜೆ.ಡಿ.ಎಸ್ ಅವರು ಕಂಟ್ರೋಲ್ ಮಾಡೋಕ್ ಆಗುತ್ತಾ..? ಭಿನ್ನಾಭಿಪ್ರಾಯ ಅಥವಾ ಸಮಸ್ಯೆ ಕೇವಲ ಮಾಧ್ಯಮಗಳ ಸೃಷ್ಟಿ.. ಈ ಬಗ್ಗೆ ಕುಮಾರಸ್ವಾಮಿ ಜೊತೆ ಮಾತುನಾಡುತ್ತೇನೆ ಎಂದು ಹೇಳಿದರು.
ಭಿನ್ನಾಭಿಪ್ರಾಯಗೆಳಲ್ಲವೂ ಮಾಧ್ಯಮಗಳ ಸೃಷ್ಟಿ
ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ನೀವೆ ಗೊಂದಲ ಸೃಷ್ಟಿಸುತ್ತಿದ್ದೀರಿ. ನೀವೆ ಒಬ್ಬೊಬ್ಬರ ಬಳಿ ಒಂದೊಂದು ಹೇಳಿಕೆ ಪಡೆದು ಗೊಂದಲ ಸೃಷ್ಟಿಸುತ್ತಿದ್ದೀರಿ. ಪದೇ ಪದೇ ಅದನ್ನ ಕೇಳಬೇಡಿ. ಇದಕ್ಕೆ ಈಗಾಗಲೆ ಉತ್ತರ ನೀಡಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡರು.