ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಏನೇ ಸಮಸ್ಯೆ ಎದುರಾದರೂ ಅದನ್ನೂ ಹಲವು ವರ್ಷಗಳಿಂದ ನಿಭಾಯಿಸಿಕೊಂಡು ಬರುತ್ತಿದ್ದ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಭಾರೀ ಪ್ರಸಿದ್ಧತೆ ಪಡೆದಿದ್ದರು.
ಡಿ.ಕೆ ಶಿವಕುಮಾರ್ ಅವರನ್ನು ಕೊತ್ವಾಲ್ ಎಂದೇ ಕರೆಯಲಾಗುತ್ತಿತ್ತು.ಯಾವುದೇ ವ್ಯಕ್ತಿಗೆ ಅಥವಾ ಯಾವುದೇ ವ್ಯಕ್ತಿಯಿಂದ ಪಕ್ಷಕ್ಕೆ ತೊಂದರೆ ಎದುರಾದರೂ ಶಿವಕುಮಾರ್ ಮಧ್ಯಸ್ಥಿಕೆ ವಹಗಿಸಿ ಬಗೆಹರಿಸಲು ಶಿವಕುಮಾರ್ ಮುಂದಾಗುತ್ತಿದ್ದರು.
ಆದರೆ ಸೋಮವಾರ ಪಕ್ಷೇತರ ಶಾಸಕ ಎಚ್,ನಾಗೇಶ್ ರಾಜಿನಾಮೆ ನೀಡಿದ್ದು ಡಿ.ಕೆ ಶಿವಕುಮಾರ್ ಗೆ ಆಘಾತ ತಂದಿದೆ., ಸಿನಿಮಾ ಶೈಲಿಯಲ್ಲಿ ವಿಮಾನ ನಿಲ್ದಾಣದವರೆಗೂ ಶಾಸಕ ನಾಗೇಶ್ ಅವರನ್ನು ಡಿ.ಕೆ ಶಿವಕುಮಾರ್ ಹಿಂಬಾಲಿಸಿದ್ದರು, ಆದರೆ ಕೇವಲ 5 ನಿಮಿಷ ತಡವಾಗಿದ್ದರಿಂದ ನಾಗೇಶ್ ಡಿಕೆಶಿ ಕೈಗೆ ಸಿಗದೇ ಹಾರಿದ್ದರು.
ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ನಾಗೇಶ್ ಕೆಪಿಟಿಸಿಎಲ್ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹೀಗಾಗಿ ಬಿಜೆಪಿಗೆ ಬೆಂಬಲ ನೀಡುವ ಬದಲು ಕಾಂಗ್ರೆಸ್ ಗೆ ನೀಡುವಂತೆ ಸೂಚಿಸಿದ್ದರು.
ಶನಿವಾರ ಉಂಟಾದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಪರಿಣಾಮ ಕನಕಪುರದಲ್ಲಿ ಜನ ಸಂಪರ್ಕ ಸಭೆ ನಡೆಸುತ್ತಿದ್ದ ಸಚಿವ ಡಿ.ಕೆ ಶಿವಕುಮಾರ್ 90 ನಿಮಿಷದಲ್ಲಿ ರಸ್ತೆ ಮೂಲಕ ವಿಧಾನಸೌಧಕ್ಕೆ ಗಡಿಬಿಡಿಯಲ್ಲಿ ಆಗಮಿಸದರು, ಆದರೆ ಅವರು ಬರುವಷ್ಟಾರಲ್ಲಾಗಲೇ 11 ಶಾಸಕರು ರಾಜಿನಾಮೆ ನೀಡಿಯಾಗಿತ್ತು.
ಕೂಡಲೇ ಸ್ಪೀಕರ್ ಕಚೇರಿಗೆ ಆಗಮಿಸಿದ ಶಿವಕುಮಾರ್, ರಾಮಲಿಂಗಾ ರೆಡ್ಡಿ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಮತ್ತು ಮುನಿರತ್ನ ಅವರ ಮನವೊಲಿಸಲು ಪ್ರಯತ್ನಿಸಿದರು.ನಾಲ್ಕು ಬಂಡಾಯ ಶಾಸಕರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಮುನ್ನ ಡಿಕೆ ಶಿವಕುಮಾರ್ ಮುನಿರತ್ನ ರಾಜಿನಾಮೆ ಪತ್ರವನ್ನು ಹರಿದು ಹಾಕಿದ್ದರು.
ಈ ಹಿಂದೆ ಆಪರೇಷನ್ ಕಮಲದಿಂದ ಕಾಂಗ್ರೆಸ್ ಪಕ್ಷವನ್ನು ರಕ್ಷಿಸಿ ಶಿವಕುಮಾರ್
ಯಶಸ್ವಿಯಾಗಿದ್ದರು. ಕಳೆದ ವರ್ಷ ಆಗಸ್ಟ್ ನಲ್ಲಿ ಗುಜರಾತ್ ನ ಕಾಂಗ್ರೆಸ್ ಶಾಸಕರನ್ನು ಕರೆತಂದು ಅಹ್ಮದ್ ಪಟೇಲ್ ಅವರನ್ನು ಗೆಲ್ಲಿಸಲು ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು, ಶಾಸಕ ಆನಂದ್ ಸಿಂಗ್ ಅವರನ್ನು ವಿಧಾನಸಭೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದರು. ಸೋಮವಾರ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos