ಮುಂಬಯಿ: ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮುಂಬಯಿಯಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್- ಜೆಡಿಎಸ್ ಶಾಸಕರು ಇಂದು ಶಿರಡಿ ಸಾಯಿಬಾಬಾ ದರ್ಶನ ಪಡೆದಿದ್ದಾರೆ.
ಇಂದು ಬೆಳಗ್ಗೆ ಅತೃಪ್ತ ಶಾಸಕರು ಮುಂಬೈ ವಿಮಾನ ನಿಲ್ದಾನದಿಂದ 18 ಆಸನದ ವಿಶೇಷ ವಿಮಾನದದಲ್ಲಿ ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದಿದ್ದಾರೆ.
ಶಿರಡಿ ನಂತರ , ಶನಿಸಿಂಗ್ಣಾಪುರ, ಅಜಂತಾ ಎಲ್ಲೋರಾ ಗುಹೆ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಿ ಬಳಿಕ ಹಿಂತಿರುಗಲಿದ್ದಾರೆ
ಇಂದು ರಾತ್ರಿ ಔರಂಗಾಬಾದ್ನಲ್ಲಿ ವಾಸ್ತವ್ಯ ಹೂಡಲಿದ್ದು, ನಾಳೆ ನಾಶಿಕ್ಗೆ ತೆರಳಿ ಅಲ್ಲಿಂದ ತ್ರಯಂಬಕೇಶ್ವರನ ದರ್ಶನ ಪಡೆದು ಮರಳಿ ಮುಂಬೈಗೆ ವಾಪಸಾಗಲಿದ್ದಾರೆ.