ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಮೈತ್ರಿ ಪಕ್ಷಗಳ ಭಿನ್ನಮತ ಶಮನ ಸುಲಭವಿಲ್ಲ-ರಾಜಕೀಯ ವಿಶ್ಲೇಷಕರ ಅಭಿಮತ

ಕಳೆದ ವರ್ಷದ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳುಗಳ ಮುನ್ನ ಎಂದರೆ 2017 ರ ಅಂತ್ಯದಲ್ಲಿ ಈಗಿನ ಮೈತ್ರಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾದಳ ತಮ್ಮ ಪ್ರಚಾರದ ಸಮಯದಲ್ಲಿ,....

ಗೋವಾದತ್ತ ತೆರಳುತ್ತಿರುವ ಅತೃಪ್ತ ಶಾಸಕರು
Raghavendra Adiga
Updated On : 15 Jul 2019, 9:02 am
ಬೆಂಗಳೂರು: ಕಳೆದ ವರ್ಷದ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳುಗಳ ಮುನ್ನ ಎಂದರೆ 2017 ರ ಅಂತ್ಯದಲ್ಲಿ ಈಗಿನ ಮೈತ್ರಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾದಳ ತಮ್ಮ ಪ್ರಚಾರದ ಸಮಯದಲ್ಲಿ, ವಿಶೇಷವಾಗಿ ಹಳೆಯ ಮೈಸೂರು ಪ್ರದೇಶದಲ್ಲಿ ಪರಸ್ಪರ ಒಬ್ಬರಿಗೊಬ್ಬರು ವಿರೋಧಿಗಳಾಗಿದ್ದವು. ಮುಖಾಮುಖಿ ಮಾತಿನ ಮೂಲಕ ದಾಳಿ ಮಾಡಿಕೊಳ್ಳುತ್ತಿದ್ದವು. ಎರಡೂ ಪಕ್ಷಗಳಿಗೆ ತಮ್ಮ ಭವಿಷ್ಯವೇನೆಂದು ತಿಳಿದಿರಲಿಲ್ಲ. ಅವಧಿ ಮುಗಿಸಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭಾವಿಸಿದ್ದರು. ಇತ್ತ ಜೆಡಿಎಸ್ ಜಿಟಿ ದೇವೇಗೌಡರನ್ನು ಚಾಮುಂಡೇಶ್ವರಿಯಲ್ಲಿ ನಿಲ್ಲಿಸಿ ಸಿದ್ದರಾಮಯ್ಯನವರನ್ನೇ ಸೋಲಿಸಲು ಮುಂದಾಗಿತ್ತು.
ಆದರೆ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ತಮ್ಮಲ್ಲೇ ಮೈತ್ರಿ ಮಾಡಿಕೊಳ್ಳುವಾಗ ಅನೇಕ ಕಹಿ ಘಟನೆಗಳನ್ನು ಮರೆಯಬೇಕಾಗಿತ್ತು. ಅಂತಹಾ ಅಡಿಪಾಯದೊಂದಿಗೆ,ರಚನೆಯಾದ ಈ ಮೈತ್ರಿ ಸರ್ಕಾರದ ಈಗಿನ ಬಿಕ್ಕಟ್ಟು ಹೆಚ್ಚಿನ ಅಚ್ಚರಿಯನ್ನುಂಟುಮಾಡುವುದಿಲ್ಲ. ಕಳೆದ ಒಂದು ವರ್ಷದಲ್ಲಿ ಅಸ್ಥಿರತೆಯ ಹಲವಾರು ಸನ್ನಿವೇಶಗಳನ್ನು ಎದುರಿಸಿರುವ ರಾಜ್ಯ ಸರ್ಕಾರ ಈಗ ಅಂತಿಮ ಕ್ಷಣದ ಕಠಿಣ ಪರೀಕ್ಷೆ ಎದುರಿಸಬೇಕಿದೆ.
ಮೂಲಗಳು ಹೇಳುವಂತೆ, ಈ ವಿಷಯವು ಒಕ್ಕೂಟವನ್ನು ತಮ್ಮ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಎಂಬುದಾಗಿ ನೋಡಲಾಗುತ್ತಿದೆ.ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಪ್ರಕಾರ ಎರಡೂ ಪಕ್ಷಗಳ ತಳಮಟ್ಟದ ಕಾರ್ಯಕರ್ತರಲ್ಲಿ ಇಂದಿಗೂ ಪೈಪೋಟಿ ಇದೆ.

Advertisement

Advertisement

ಈ ಮೂಲಭೂತ ವಿಷಯಕ್ಕೆ ಹೆಚ್ಚುವರಿಯಾಗಿ ವಿವಿಧ ಹಿರಿಯ ರಾಜಕಾರಣಿಗಳ ಬೇಡಿಕೆ ಈಡೇರದೆ ಉಳಿದಿರುವುದು, ಅವರಲ್ಲಿನ ಅಹಂಕಾರಕ್ಕೆ ಪೆಟ್ಟು ಬೀಳುತ್ತಿರುವುದು ಉರಿವ ಬೆಂಕಿಗೆ ತುಪ್ಪವಾಗಿದೆ. ರಾಮಲಿಂಗಾ ರೆಡ್ಡಿ, ಈಗ ರಾಜೀನಾಮೆ ಸಲ್ಲಿಸಿದ್ದು ಭಿನ್ನಮತದ ಮುಂಚೂಣಿಯಲ್ಲಿದ್ದಾರೆ.ಇನ್ನು  ಎ.ಎಚ್. ​​ವಿಶ್ವನಾಥ್ ಹಲವಾರು ಪ್ರಯತ್ನದ ಹೊರತಾಗಿಯೂ ಮನ್ವಯ ಸಮಿತಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅಂತಿಮವಾಗಿ, ಜೆಡಿಎಸ್ ಮೂಲ ಕುಟುಂಬದ ಹಸ್ತಕ್ಷೇಪವೇ ದಂಗೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತ ಬೊಜೆಪಿ ಅಧಿಕಾರಕ್ಕಾಗಿ ಕಾಯುತ್ತಿದ್ದಾಗಲೇ ಮೈತ್ರಿಪಕ್ಷದ ನಾಯಕರ ಈ ಕಿತ್ತಾಟ ಕೇಸರಿ ಪಾಳಯಕ್ಕೆ ದೈವದತ್ತ ವರವಾಗಲಿದೆ.ಪಕ್ಷವು ಎರಡೂ ಕೈಗಳಿಂದ ಈ ಅವಕಾಶವನ್ನು ಕಬಳಿಸಲು ಮುಂದಾಗಿದೆ.ಏಕೈಕ ದೊಡ್ಡ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೇರಲು ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿದೆ.ಇನ್ನು ಚುನಾವಣೆ ಬಳಿಕ ತಾನು ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಹೋಗಿರುವುದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ನ ಉತ್ತಮ ಸಾಧನೆ ಬಿಜೆಪಿಯನ್ನು ಗೊಂದಲಕ್ಕೆ ದೂಡಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯು ಲಾಭ ಪಡೆಯಲು ಸಕಾಲವಾಗಿದೆ.
ರಾಜಕೀಯ ವಿಶ್ಲೇಷಕರು ಪ್ರಸ್ತುತ ಪ್ರಕ್ಷುಬ್ಧತೆಯನ್ನು ಸಮ್ಮಿಶ್ರ ಸರ್ಕಾರಗಳು ಅನುಭವಿಸುವ ಸಾಮಾನ್ಯ ಅಸ್ಥಿರತೆಯ ಒಂದು ಭಾಗವೆಂದು ಭಾವಿಸುತ್ತಾರೆ. ಪ್ರೊಫೆಸರ್ ಮುಜಾಫರ್ ಅಸ್ಸಾದಿ ಅವರ ಪ್ರಕಾರ, ಪಕ್ಷಾಂತರನಿಷೇಧ ಕಾನೂನು ಅನ್ವಯವಾದರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಕುಸಿಯುತ್ತಿತ್ತು. ಈಗ ನಡೆಯಲಿರುವ ವಿಶ್ವಾಸಮತ ಸಮ್ಮಿಶ್ರ ಸರ್ಕಾರ ಉಳಿವಿಗಿರುವ ಕಡೆಯ ಪ್ರಯತ್ನವಾಗಲಿದೆ. "ಸ್ಥಿರತೆಯನ್ನು ತರುವದಕ್ಕಾಗಿ  ಪರಿಹಾರವು ಬಹುಪಾಲು ಶಾಸಕರಿಗೆ ಮಂತ್ರಿಗಳಾಗುವ ಅವಕಾಶವನ್ನು ಕಲ್ಪಿಸುವ ಸೂತ್ರವೇ ಇಲ್ಲಿ ಕೆಲಸ ಮಾಡಲಿದೆ.ಪ್ರತಿವರ್ಷವೂ ಮಂತ್ರಿಗಳನ್ನು ಬದಲಿಸುವ ಮೂಲಕ ಹೊಸ ಶಾಸಕರಿಗೆ ಮಂತ್ರಿಗಿರಿ ನೀಡುವುದು  ಆ ಮೂಲಕ ಸಂಪುಟ  ಪುನರ್ರಚನೆ  ಮಾಡುವುದು ಇದಕ್ಕೆ ಸೂಕ್ತ ಪರಿಹಾರವಾಗಲಿದೆ" ಅವರು ಹೇಳಿದರು.
 "ಮತದಾರರು ಸಾರ್ವಜನಿಕ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡಿದರೆ, ರಾಜ್ಯವು ಬರಗಾಲದಿಂದ ತತ್ತರಿಸುತ್ತಿರುವಾಗ ಅವರು ರೆಸಾರ್ಟ್‌ಗಳಲ್ಲಿ ಸಮಯ ಕಳೆಯುವ ಧೈರ್ಯವನ್ನು ಹೊಂದಿರುವುದಿಲ್ಲ" ಎಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನ ವಿಭಾಗದ ಪ್ರೊಫೆಸರ್ ರಾಜಾರಾಮ್ ತೋಳ್ಪಾಡಿ ಹೇಳಿದ್ದಾರೆ. "ಅಂಗಪಕ್ಷಗಳಲ್ಲಿ ಸಾಮಾಜಿಕ ಕಳಕಳಿ ಕಡಿಮೆ ಇದ್ದಾಗ ಮತ್ತು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದೇ ಮುಖ್ಯವಾದಾಗ ಸರ್ಕಾರಗಳು ಇಂತಹ ಬಿಕ್ಕಟ್ಟಿಗೆ ಹೆಚ್ಚು ಒಳಗಾಗುತ್ತವೆ" ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement