ಬೆಂಗಳೂರು: ನಾಳೆ ಸುಪ್ರೀಂ ತೀರ್ಪು ಏನಾಗಿರಲಿದೆ. ಗುರುವಾರ ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲುತ್ತೇವಾ ಎಂದು ಮೈತ್ರಿ ಸರ್ಕಾರದ ನಾಯಕರು ತಲೆ ಕೆಡಿಸಿಕೊಂಡಿದ್ದರೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾತ್ರ ರೆಸಾರ್ಟ್ ನಲ್ಲಿ ತಮ್ಮ ಶಾಸಕರೊಂದಿಗೆ ಕ್ರಿಕೆಟ್ ಆಡುವ ಮೂಲಕ ಜಾಲಿಯಾಗಿದ್ದರು.
ರಮಡ ರೆಸಾರ್ಟ್ ಗೆ ಸಂಜೆ ಆಗಮಿಸಿದ ಯಡಿಯೂರಪ್ಪ ಅವರು ಬಿಜೆಪಿ ಶಾಸಕರೊಂದಿಗೆ ಕ್ರಿಕೆಟ್ ಆಡಿದರು. ಬಿಎಸ್‌ವೈ ಬ್ಯಾಟ್ ಹಿಡಿದು ಚೆಂಡನ್ನು ಹೊಡೆಯುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಿಧಾನಸಭೆ ಅಧಿವೇಶನ ಮುಂದೂಡಿದ್ದರಿಂದ ಎಲ್ಲಾ ಪಕ್ಷದ ಶಾಸಕರು ರೆಸಾರ್ಟ್ ಗಳಲ್ಲಿ ತಂಗಿದ್ದಾರೆ. ಗುರುವಾರ ನಿಗದಿಯಾಗಿರುವ ವಿಶ್ವಾಸಮತ ಯಾಚನೆ ಸಫಲವಾಗುತ್ತದೆಯೋ, ವಿಫಲವಾಗುತ್ತದೆಯೋ ಎಂಬ ಆತಂಕದಲ್ಲಿ ಮೈತ್ರಿ ನಾಯಕರಿದ್ದಾರೆ. ಆದರೆ ಬಿಜೆಪಿ ಮಾತ್ರ ಯಾವು ಆಂತಕವೂ ಇಲ್ಲದೇ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics