ಬರಿಗಾಲ ಪೂಜೆಗೂ ಕರಗದ ದೇವರು, ನಡೆಯದ ಪವಾಡ: ರೇವಣ್ಣ 'ಕೈ' ಹಿಡಿಯಲಿಲ್ಲ ನಿಂಬೆಹಣ್ಣು!
ಏನಾದರೂ ಮಾಡಿ ಸಹೋದರನ ಸರ್ಕಾರವನ್ನು ರಕ್ಷಿಸಬೇಕೆಂದು ಎಚ್.ಡಿ ರೇವಣ್ಣ ಬರಿಗಾಲಲ್ಲಿ ನಡೆದು, ನಿಂಬೆಹಣ್ಣನ್ನು ಕೈಯ್ಯಲ್ಲಿ ಹಿಡಿದುಕೊಂಡು ವಿಧಾನಸಭೆ ...
ಬೆಂಗಳೂರು: ಏನಾದರೂ ಮಾಡಿ ಸಹೋದರನ ಸರ್ಕಾರವನ್ನು ರಕ್ಷಿಸಬೇಕೆಂದು ಎಚ್.ಡಿ ರೇವಣ್ಣ ಬರಿಗಾಲಲ್ಲಿ ನಡೆದು, ನಿಂಬೆಹಣ್ಣನ್ನು ಕೈಯ್ಯಲ್ಲಿ ಹಿಡಿದುಕೊಂಡು ವಿಧಾನಸಭೆ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ,
ಮಂಗಳವಾರ ಸಂಜೆವರೆಗೂ ವಿಶ್ವಾಸಮತ ಯಾಚನೆಯಲ್ಲಿ ತಮಗೆ ಪವಾಡ ರೀತಿಯಲ್ಲಿ ಗೆಲುವು ಸಿಗುತ್ತದೆ ಎಂದು ರೇವಣ್ಣ ನಂಬಿದ್ದರು. ತಮ್ಮ ಸಹೋದರ ಸಿಎಂ ಕುಮಾರಸ್ವಾಮಿಗಿಂತಲೂ ಸಮ್ಮಿಶ್ರ ಸರ್ಕಾರದಲ್ಲಿ ರೇವಣ್ಣ ಅವರೇ ಸೂಪರ್ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕುಮಾರಸ್ವಾಮಿ ಅವರ ಬದಲು ರೇವಣ್ಣ ಅವರೇ ಹೆಚ್ಚಿನ ನಿರ್ಧಾರ ಕೈಗೊಳ್ಳುತ್ತಿದ್ದರು.ಹೀಗಾಗಿ ಅಕ್ಷರಶಃ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದರು. ಹೀಗಾಗಿ ಕುಮಾರಸ್ವಾಮಿ ಅವರಿಗಿಂತ ಇಲ್ಲಿ ಹೆಚ್ಚು ನಷ್ಟವಾಗಿದ್ದು ರೇವಣ್ಣ ಅವರಿಗೆ.
ಲೋಕೋಪಯೋಗಿ ಇಲಾಖೆ ಮಾತ್ರವಲ್ಲ ಅದರಾಚೆಗೂ ರೇವಣ್ಣ ಕೈ ಎಲ್ಲಾ ಕಡೆ ಆಡುತ್ತಿತ್ತು. ಕೇವಲ ಲೋಕೋಪಯೋಗಿ ಇಲಾಖೆ ಮಾತ್ರವಲ್ಲ, ತಮ್ಮದಲ್ಲದ ಎಲ್ಲಾ ಇಲಾಖೆಗಳಲ್ಲೂ ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದರು, ಸಿಎಂ ಕಚೇರಿಗೆ ಪರ್ಯಾಯವಾಗಿ ರೇವಣ್ಣ ಕಚೇರಿ ಮತ್ತೊಂದು ಸಿಎಂ ಕಚೇರಿಯಂತೆ ಕೆಲಸ ಮಾಡುತ್ತಿತ್ತು,
ತಮ್ಮ 14 ತಿಂಗಳ ಅವಧಿಯಲ್ಲಿ ರೇವಣ್ಣ ದಿನಕ್ಕೆ ಮೂರು ಬಾರಿ ಬೆಳಗ್ಗೆ., ಮಧ್ಯಾಹ್ನ ಹಾಗೂ ಸಂಜೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ನನ್ನದು ಸ್ವಾತಿ ನಕ್ಷತ್ರ, ಯಾರೂ ನನ್ನನ್ನು ಏನೂ ಮಾಡಲಾಗದು ಎಂದು ಹೇಳಿದ್ದರು. ಆದರೆ ಮಂಗಳವಾರ ಮಾತ್ರ ರೇವಣ್ಣ ಅವರನ್ನು ಯಾವ ದೇವರು ಬಂದು ಕಾಪಾಡಲಿಲ್ಲ, ಹಾಸನ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ರೇವಣ್ಣ ಅವರೇ ತೆಗೆದುಕೊಳ್ಳುತ್ತಿದ್ದರು.ಹೀಗಾಗಿ ರೇವಣ್ಣ ಅವರ ಗ್ರೇಟ್ ಪವರ್ ಮೊಟಕುಗೊಂಡಿದೆ. ರೇವಣ್ಣ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಇದು ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಸಹಾಯವಾಗಲಿದೆ ಎಂದು ಕಾದು ನೋಡಬೇಕಾಗಿದೆ.