ಎನ್. ಮಹೇಶ್, ಮಾಯಾವತಿ 
ರಾಜಕೀಯ

ಮಾಯಾವತಿ ಆದೇಶ ಉಲ್ಲಂಘಿಸಿಲ್ಲ, ಹೈಕಮಾಡ್ ಆದೇಶದಂತೆ ವಿಶ್ವಾಸಮತದಿಂದ ದೂರವಿದ್ದೆ: ಎನ್. ಮಹೇಶ್

ತನ್ನ ಪಕ್ಷದ ಹೈಕಮಾಂಡ್ ನನಗೆ ವಿಶ್ವಾಸಮತದಿಂದ ದೂರವಿರಲು,ತಟಸ್ಥವಾಗಿರಲು ಹೇಳಿತ್ತು ಹಾಗಾಗಿ ನಾನು ವಿಶ್ವಾಸಮತಕ್ಕೆ ಗೈರಾಗಿದ್ದೆ ಎಂದು ಕರ್ನಾಟಕದ ಏಕೈಕ ಬಿಎಸ್ಪಿ ಶಾಸಕ ಎನ್ ಮಹೇಶ್ ಹೇಳಿದ್ದಾರೆ.

ಬೆಂಗಳೂರು: ತನ್ನ ಪಕ್ಷದ ಹೈಕಮಾಂಡ್ ನನಗೆ ವಿಶ್ವಾಸಮತದಿಂದ ದೂರವಿರಲು,ತಟಸ್ಥವಾಗಿರಲು ಹೇಳಿತ್ತು ಹಾಗಾಗಿ ನಾನು ವಿಶ್ವಾಸಮತಕ್ಕೆ ಗೈರಾಗಿದ್ದೆ ಎಂದು ಕರ್ನಾಟಕದ ಏಕೈಕ ಬಿಎಸ್ಪಿ ಶಾಸಕ ಎನ್ ಮಹೇಶ್ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆಯಲ್ಲಿ ನಿನ್ನೆ ನಡೆದಿದ್ದ ವಿಶ್ವಾಸಮತದಲ್ಲಿ ಸಿಎಂ ಎಚ್,ಡಿ. ಕುಮಾರಸ್ವಾಮಿ ಅವರನ್ನು ಬೆಂಬಲಿಸಿ  ಮತ ಚಲಾಯಿಸದ ಕಾರಣ ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮಹೇಶ್ ತಾವು ಬಿಜೆಪಿ ಸರ್ಕಾರವನ್ನು ಬೆಂಬಲಿಸುವುದಿಲ್ಲ ಮತ್ತು ತಟಸ್ಥವಾಗಿರುತ್ತೇನೆ ಎಂದರು."ನಾನು ಇಂದು ನನ್ನ ಉಚ್ಚಾಟನೆ ಬಗೆಗೆ ಮಾಹಿತಿ ಪಡೆದುಕೊಂಡಿದ್ದೆ ಹಾಗಾಗಿ ಣಾನಿಲ್ಲಿಗೆ ಆಗಮಿಸಿದ್ದೇನೆ. ನಮ್ಮ ಪಕ್ಷದ ಉಸ್ತುವಾರಿ ಸಂಸದ ಅಶೋಕ್ ಸಿದ್ಧಾರ್ಥ್ ಅವರು ಮತದಾನದಿಂದ ದೂರವಿರಲು, ತಟಸ್ಥವಾಗಿರಲು ಮತ್ತು ಯಾವುದೇ ಪಕ್ಷವನ್ನು ಬೆಂಬಲಿಸಬೇಡಿ ಎಂಬುದಾಗಿ ನನಗೆ ಸೂಚನೆ ನೀಡಿದ್ದರು.ಅದಕ್ಕನುಗುಣವಾಗಿ ನಾನು ಸದನಕ್ಕೆ ಗೈರಾಗಿದ್ದೆ" ಅವರು ಹೇಳೀದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸದ ಕಾರಣ ಅವರನ್ನು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪಕ್ಷದಿಂದ ಉಚ್ಚಾಟಿಸಿದ್ದ ಬಗ್ಗೆ ಕೇಳಲಾದ ಪ್ರಶ್ನೆಗೆ ನನಗದು ತಿಳಿದಿಲ್ಲ, ಇಂದೇ ನನಗದರ ಅರಿವಾಗಿದೆ. ನಾನು ಪಕ್ಷದ ಶಿಸ್ತಿಗೆ ಯಾವ ಚ್ಯುತಿ ತಂದಿಲ್ಲ, ಬೆಹನ್ ಜಿ (ಮಾಯಾವತಿ) ಆದೇಶ ಉಲ್ಲಂಘಿಸಿಲ್ಲ" ಮಹೇಶ್ ಹೇಳಿದ್ದಾರೆ.
"ನಾನು ಪಕ್ಷದ ನಿಯಮಾವಳಿಯನ್ನು ಉಲ್ಲಂಘಿಸಿಲ್ಲದ ಕಾರಣ ನನಗೆ ಈ ತೀರ್ಮಾನ ಅಚ್ಚರಿ ತಂದಿದೆ, ನಾನು ಒಂದು ವಾರ ನನ್ನ ಕ್ಷೇತ್ರದಲ್ಲಿದ್ದೆ. ಬೆಂಗಳೂರಿಗೆ ಇಂದಷ್ಟೇ ಬಂದಿದೇನೆ. ಇಂದು ಬೆಳಿಗ್ಗೆ ನನಗೆ ನನ್ನನ್ನು ಪಕ್ಷದಿಂದ ಹೊರಹಾಕಲ್ಪಟ್ಟಿರುವ ಬಗ್ಗೆ ತಿಳಿಯಿತು. ಇದು ತಪ್ಪು ಭಾವನೆಗಳಿಂದ ಆಗಿರಬಹುದು. ಇಂದಲ್ಲ ನಾಳೆ ಇದು ಸರಿಹೋಗಲಿದೆ, ನನಗೆ ನ್ಯಾಯ ದೊರಕಲಿದ್ದು ನಾನು  ಬಿಎಸ್ಪಿಯಲ್ಲಿಯೇ ಉಳಿಯುತ್ತೇನೆ."
"ನಾನು ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಅವರು ಸರ್ಕಾರ ರಚಿಸಲಿ, ನಾನು ತಟಸ್ಥವಾಗಿರುತ್ತೇನೆ" 
ಕರ್ನಾಟಕದ 14 ತಿಂಗಳ ಕಾಂಗ್ರೆಸ್-ಜೆಡಿಎಸ್ ಮ್ಮಿಶ್ರ ಸರ್ಕಾರವು ಮಂಗಳವಾರ ಕರ್ನಾಟಕ ವಿಧಾನಸಭೆಯಲ್ಲಿನ ವಿಶ್ವಾಸಮತ ಸೋಲಿನೊಡನೆ ಪತನವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

SCROLL FOR NEXT