ನಿರ್ಗಮಿತ ಸಿಎಂ ಹೆಚ್ ಡಿ ಕುಮಾರಸ್ವಾಮಿಯಿಂದ ರಾಜ್ಯದ ಜನತೆಗೆ ಕೊನೆಯ ಬಂಪರ್ ಗಿಫ್ಟ್!
ಭೂಮಿಯಿಲ್ಲದ ರೈತರಿಗೆ, 2 ಹೆಕ್ಟೇರ್ ಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ಅಥವಾ 1 ಲಕ್ಷ 20 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿರುವವರಿಗಾಗಿ...
ಬೆಂಗಳೂರು: ಭೂಮಿಯಿಲ್ಲದ ರೈತರಿಗೆ, 2 ಹೆಕ್ಟೇರ್ ಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ಅಥವಾ 1 ಲಕ್ಷ 20 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿರುವವರಿಗಾಗಿ ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಿದ್ದೇವೆ ಎಂದು ಉಸ್ತುವಾರಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದಿರುವ ಬಡವರು ಅಥವಾ ರೈತರು ತಾವು ಮುಂದಿನ 90 ದಿನ ಒಳಗೆ ಸಾಲದ ಮಾಹಿತಿಯನ್ನು ನೋಡಲ್ ಅಧಿಕಾರಿಗೆ ತಲುಪಿಸಬೇಕು ಇದರಿಂದ 1 ಬಾರಿ ಸಂಪೂರ್ಣವಾಗಿ ಸಾಲ ಮನ್ನವಾಗುತ್ತದೆ.
ಋಣಮುಕ್ತ ಕಾಯ್ದೆ ಅನುಷ್ಠಾನಕ್ಕೂ ಮುನ್ನ ದಿನದಿಂದ ಸಾಲ ಪಡೆದಿರುವವರಿಗೆ ಇದರಿಂದ ಅನುಕೂಲವಾಗುತ್ತದೆ. ಮೊದಲು ಸಾಲ ಪಡೆದವರಿಗೆ ಮಾತ್ರ ಇದರಿಂದ ಅನುಕೂಲವಾಗುತ್ತದೆ. ನಿನ್ನೆಯೇ ಇದಕ್ಕೆ ಅಧಿಸೂಚನೆ ಹೊರಡಿಸಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಈ ಕಾಯ್ದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಗೀಕಾರ ನೀಡಿದ್ದರಿಂದ ಈ ಕಾಯ್ದೆಗೆ ನಿನ್ನೆಯೇ ಅಧಿಸೂಚನೆ ಹೊರಡಿಸಿದ್ದೇವು ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆಯಲಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.