ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ಹೆಚ್ಚು ಅನುದಾನ, ನೇಕಾರರ ಸಾಲ ಮನ್ನಾ, ಜು.29ಕ್ಕೆ ಬಹುಮತ ಸಾಬೀತು: ಸಿಎಂ ಯಡಿಯೂರಪ್ಪ 
ರಾಜಕೀಯ

ರೈತರಿಗೆ ಗಿಫ್ಟ್, ನೇಕಾರರ ಸಾಲ ಮನ್ನಾ, ಜು.29ಕ್ಕೆ ಬಹುಮತ ಸಾಬೀತು: ಸಿಎಂ ಯಡಿಯೂರಪ್ಪ ಘೋಷಣೆ

ಜು.29 ಕ್ಕೆ ಬಹುಮತ ಸಾಬೀತುಪಡಿಸುವುದಾಗಿ ನೂತನ ಸಿಎಂ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

ಬೆಂಗಳೂರು: ಜು.29 ಕ್ಕೆ ಬಹುಮತ ಸಾಬೀತುಪಡಿಸುವುದಾಗಿ ನೂತನ ಸಿಎಂ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. 
ಪ್ರಮಾಣವಚನ ಸ್ವೀಕರಿಸಿ, ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿರುವ ಯಡಿಯೂರಪ್ಪ, ತಮ್ಮ ನೇತೃತ್ವದ ಸರ್ಕಾರದ ಮೊದಲ ನಿರ್ಣಯಗಳನ್ನು ತಿಳಿಸಿದ್ದಾರೆ. 
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದಿಂದಲೂ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರ ಮೂರು ಕಂತುಗಳಲ್ಲಿ 2 ಸಾವಿರ ರೂಪಾಯಿಯಂತೆ ವಾರ್ಷಿಕ 6 ಸಾವಿರ ರೂಪಾಯಿ ನೀಡುತ್ತಿದೆ. ಈ ಯೋಜನೆಗೆ ರಾಜ್ಯ ಸರ್ಕಾರವೂ ಅನುದಾನ ನೀಡಲಿದ್ದು, 2 ಕಂತುಗಳಲ್ಲಿ 2 ಸಾವಿರದಂತೆ ಒಟ್ಟಾರೆ 4 ಸಾವಿರ ರೂಪಾಯಿ ಹಣವನ್ನು ರೈತರ ಖಾತೆಗೆ ಕಳುಹಿಸುತ್ತೇವೆ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. 
ರಾಜ್ಯ ಸರ್ಕಾರದ ಈ ನಿರ್ಣಯದಿಂದ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟಾರೆ 10 ಸಾವಿರ ರೂಪಾಯಿ ಹಣ ಸಿಗಲಿದೆ. ನೇಕಾರರ 100 ಕೋಟಿ ರೂಪಾಯಿ ಸಾಲ ಮನ್ನಾವನ್ನೂ ಸಿ.ಎಂ ಯಡಿಯೂರಪ್ಪ ಸುದ್ದಿಗೋಷ್ಟಿಯಲ್ಲಿ ಘೋಷಿಸಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧರ್ಮೇಂದ್ರ ಪ್ರಧಾನ್ ರನ್ನು ವಜಾ ಮಾಡಿ; ಇಲ್ಲದಿದ್ದರೆ ನಿಮ್ಮ ರಾಜೀನಾಮೆಯನ್ನೂ ಕೇಳುತ್ತೇವೆ': ಪ್ರಧಾನಿ ಮೋದಿಗೆ CJP ಮುಖ್ಯಸ್ಥ Abhijeet Dipke ಒತ್ತಾಯ

ಸೋನಮ್, ಸಹೋದರ ಸಾಕು ನಿಲ್ಲಿಸು; ಪ್ರತಿಭಟನೆ ನಿಲ್ಲಿಸಿ ವಿದ್ಯಾರ್ಥಿಗಳೇ ಮನೆಗೆ ಹೋಗಿ: ಪ್ರಧಾನಿ ನೋಡ್ಕೋತಾರೆ; ಸಲ್ಮಾನ್ ಖಾನ್!

CJP Protest: 'ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಸಂಸ್ಕೃತಿ ಸೃಷ್ಟಿಸಬೇಕು': ಕೊನೆಗೂ ಮೌನ ಮುರಿದ Sachin Tendulkar

KPSC ಪರೀಕ್ಷೆ ಅಕ್ರಮ: 80 ಲಕ್ಷಕ್ಕೆ ಸರ್ಕಾರಿ ಉದ್ಯೋಗ ಫಿಕ್ಸ್; ಎಚ್ಚೆತ್ತ ಕರ್ನಾಟಕ ಗೃಹ ಇಲಾಖೆ!

'ನೀಟ್‌ ಪರೀಕ್ಷಾ ವ್ಯವಸ್ಥೆ ಕುರಿತು ವಿದ್ಯಾರ್ಥಿಗಳ ಆತಂಕ ನಿಜವಾದದ್ದು; ಲಾಠಿ ಚಾರ್ಜ್‌ ನೋವು ತಂದಿದೆ': Murli Manohar Joshi