ರಾಜಕೀಯ

ಸಿದ್ದರಾಮಯ್ಯ ಲಿಂಗಾಯತರೇನ್ರಿ? ಮಾಜಿ ಸಿಎಂ ವಿರುದ್ಧ ಸಿಡಿದೆದ್ದ ಶಾಮನೂರು ಶಿವಶಂಕರಪ್ಪ

Raghavendra Adiga
ಬೆಂಗಳೂರು: ವೀರಶೈವರು ಮತ್ತು ಲಿಂಗಾಯತರು ಒಂದೇ ನಾಣ್ಯದ ಎರಡು ಮುಖ ಎಂದು ಹಿರಿಯ ಕ್ಜಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಅಲ್ಲದೆ ಈ ಹಿಂದೆ ತಮ್ಮ ಸಮುದಾಯವನ್ನು ವಿಭಜಿಸಲು ಮುಂದಾಗಿದ್ದ ತಮ್ಮ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ವಿರುದ್ಧ ಕಿಡಿ ಕಾರಿದ್ದಾರೆ.
'ಬಸವ ಧರ್ಮ' ಸ್ವತಂತ್ರ ಧರ್ಮವಾಗಿದ್ದು, ಇದು ಹಿಂದೂ ಧರ್ಮದ ಒಳಗೆ ಅಥವಾ ಹೊರಗೆ ಇಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಅವರು ಪ್ರತಿಕ್ರಯಿಸಿದರು.
"... ಆ ವಿಷಯಗಳ ಬಗ್ಗೆ ಚರ್ಚಿಸಬಾರದು, ವೀರಶೈವ ಮತ್ತು ಲಿಂಗಾಯತ ಒಂದೇ, ಎರಡು ನಾಣ್ಯದ ಎರಡು ಮುಖಗಳು, ನಾವು ಅದನ್ನು ಅನುಸರಿಸುತ್ತಿದ್ದೇವೆ ಎಂಬುದನ್ನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. " ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಿವಶಂಕರಪ್ಪ ಹೇಳಿದರು. .
"ಯಾವ ಕಾರಣಕ್ಕೂ ನಮ್ಮ ಒಗ್ಗಟ್ಟನ್ನು ಮುರಿಯುವ ಕೆಲಸ ಮಾಡಬಾರದು, ನಾವೆಲ್ಲರೂ ಒಂದೇ" 
ಸಿದ್ದರಾಮಯ್ಯ ಅವರ ಟೀಕೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಸಿದ್ದರಾಮಯ್ಯ ಅವರೇನು ಲಿಂಗಾಯತರೇ? ಅವರು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ, ಆದರೆ ಅದಕ್ಕಾಗಿ ಣಾನೇನು ಮಾಡಲಾಗುತ್ತದೆ? ಅವರು ಅಧಿಕಾರದಲ್ಲಿದ್ದಾಗ ನಮ್ಮನ್ನು ವಿಭಜಿಸಲು ಪ್ರಯತ್ನಿಸಿದರು. ಆದರೆ ಅದು ಆಗದ ಕಾರಣಕ್ಕೆ ಹೀಗೆನ್ನುತಿದ್ದಾರೆ."
ಬಸವೇಶ್ವರ ಪ್ರಾರಂಭಿಸಿದ ಮತ್ತು ಕರ್ನಾಟಕದಲ್ಲಿ, ವಿಶೇಷವಾಗಿಉತ್ತರ ಕರ್ನಾಟಕದಲ್ಲಿ ಗಣನೀಯ ಜನಸಂಖ್ಯೆಯನ್ನು ಹೊಂದಿರುವ ಲಿಂಗಾಯತ, ವೀರಶೈವ ಸಮುದಾಯ 12 ನೇ ಶತಮಾನದ  "ಸಾಮಾಜಿಕ ಸುಧಾರಣಾ ಆಂದೋಲನಕ್ಕೆ" ನಿಷ್ಠರಾಗಿದೆ. ಲಿಂಗಾಯತ ಧರ್ಮಕ್ಕೆ "ಧಾರ್ಮಿಕ ಅಲ್ಪಸಂಖ್ಯಾತ" ಸ್ಥಾನಮಾನವನ್ನು ನೀಡಲು ಸಿದ್ದರಾಮಯ್ಯ ನೇತೃತ್ವದ ಆಗಿನ ಕಾಂಗ್ರೆಸ್ ಸರ್ಕಾರ ನಡೆಸಿದ ಪ್ರಯತ್ನ 018 ರ ವಿಧಾನಸಭಾ ಚುನಾವಣೆಗೆ ಮುನ್ನ  ಆ ಸಮಾಜವನ್ನು ಒಡೆದ ಮನೆಯಾಗಿಸಿತ್ತು. ವೀರಶೈವ-ಲಿಂಗಾಯತ ನಂಬಿಕೆಗಳಿಗೆ ಪ್ರತ್ಯೇಕ ಧರ್ಮದ ಬೇಡಿಕೆಯು ಬಲವಾಗಿದ್ದು ರಾಜಕೀಯವಾಗಿ ಪ್ರಭಾವಶಾಲಿ ಸಮುದಾಯದ ಬೇಡಿಕೆಯಾಗಿದೆ. ಆದರೆ ಎರಡು ಸಮುದಾಯಗಳನ್ನು ಒಂದೇ ಎಂದು  ವಾದಿಸುವವರೂ ಸಹ ಬಲಿಷ್ಟರಾಗಿದ್ದು  ಪ್ರಕ್ಷೇಪಿಸುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಭದ್ರನೆಲೆಯನ್ನು ಕಳೆದುಕೊಳ್ಲಲು ಈ ಧರ್ಮ ವಿಭಜನೆಯೂ ಒಂದು ಕಾರಣವೆನ್ನಲಾಗಿದೆ.
SCROLL FOR NEXT