ರಾಜಕೀಯ

ಬಿ.ಎಸ್.ವೈ ಮೂರು ದಿನಗಳ ಬರ ಪರಾಮರ್ಶೆ ಪ್ರವಾಸ ಮುಕ್ತಾಯ

Nagaraja AB
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮೂರು ದಿನಗಳ ಬರ ಪರಾಮರ್ಶೆ ಪ್ರವಾಸ ಮುಕ್ತಾಯಗೊಂಡಿದೆ. ಬಾದಾಮಿ, ಹುನಗುಂದ, ಕೊಪ್ಪಳ, ಗಂಗಾವತಿ, ಲಿಂಗಸಗೂರು, ಯಾದಗಿರಿ ಮತ್ತು ಗುರುಮಿಠಕಲ್ ನಲ್ಲಿ ಪರಾಮರ್ಶೆ ನಡೆಸಿದ ಯಡಿಯೂರಪ್ಪ, ಸರ್ಕಾರಕ್ಕೆ ವರದಿ ಸಲ್ಲಿಸಲು ಚಿಂತಿಸಿದ್ದಾರೆ. 
ಬರಗಾಲದ ಅವಲೋಕನದ ಅಂತಿಮ ದಿನದಂದು, ಯಡಿಯೂರಪ್ಪ , ಕಿಕ್  ಬ್ಯಾಕ್ ಪಡೆದು ಜೆಎಸ್ ಡಬ್ಲ್ಯೂಗೆ ಭೂಮಿ  ಮಾರಾಟ ಮಾಡಲಾಗಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 
ಜೆಎಸ್ ಡಬ್ಲ್ಯೂಗೆ ಭೂಮಿ ಮಾರಾಟ ವಿರುದ್ಧ   ಬಿಜೆಪಿ ಕರೆ ನೀಡಿದ್ದ ಮೂರು ದಿನಗಳ ಪ್ರತಿಭಟನೆ ಮುಂದೂಡಲಾಗಿದೆ. ಜೂನ್ 13ರಿಂದ ಪ್ರತಿಭಟನೆ ಆರಂಭಿಸುವುದಾಗಿ ಹೇಳಲಾಗಿತ್ತು. ಆದರೆ, ಅಂದು ಅಮಿತ್  ಶಾ ಅವರೊಂದಿಗೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಯಡಿಯೂರಪ್ಪ ಪಾಲ್ಗೊಳ್ಳುತ್ತಿರುವುದರಿಂದ ಇದನ್ನು ಮುಂದೂಡಲಾಗಿದೆ. 
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ  ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಬಿಜೆಪಿ ಘಟಕಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಪಾಲ್ಗೊಳ್ಳುತ್ತಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅಮಿತ್ ಶಾ ಅಭಿನಂದಿಸುವ ಸಾಧ್ಯತೆ ಇದೆ.
SCROLL FOR NEXT