ವೀರಪ್ಪ ಮೊಯ್ಲಿ 
ರಾಜಕೀಯ

ಬದಲಾದ ಬದುಕಂತೆ ಬದಲಾಯ್ತು ನಾಮಫಲಕ: 'ಖಾದಿ ಬಿಟ್ಟು ಕಪ್ಪು ಕೋಟಿ'ಗೆ ಮರಳಿದ ಮಾಜಿ ಸಿಎಂ!

ಮಾಜಿ ಸಂಸದ ವೀರಪ್ಪ ಅವರನ್ನು ಭೇಟಿ ಮಾಡಲು ಬರುವವರಿಗೆ ಅವರ ಮನೆಯ ಮುಂದೆ ಹಾಕಿರುವ ಬೋರ್ಡ್ ಅಚ್ಚರಿ ಮೂಡಿಸಿದೆ. ಮೊಯ್ಲಿ ತಾವು ಮಾಜಿ ಸಿಎಂ ...

ಬೆಂಗಳೂರು: ಮಾಜಿ ಸಂಸದ ವೀರಪ್ಪ ಅವರನ್ನು ಭೇಟಿ ಮಾಡಲು ಬರುವವರಿಗೆ ಅವರ ಮನೆಯ ಮುಂದೆ ಹಾಕಿರುವ ಬೋರ್ಡ್ ಅಚ್ಚರಿ ಮೂಡಿಸಿದೆ. ಮೊಯ್ಲಿ ತಾವು  ಮಾಜಿ ಸಿಎಂ ಅಥವಾ ಮಾಜಿ ಕೇಂದ್ರ ಸಚಿವ ಎಂಬುದನ್ನು ಬಿಟ್ಟು ಸುಪ್ರೀಂ ಕೋರ್ಟ್ ವಕೀಲರು ಎಂಬ ನೇಮ್ ಪ್ಲೇಟ್ ಹಾಕಿಕೊಂಡಿದ್ದಾರೆ.
ಸೋಮವಾರ ತಮ್ಮ ನಾಮಫಲಕ ಬದಲಿಸಿರುವ ಮೊಯ್ಲಿ ವಕೀಲರಾಗಿ ಹೈಕೋರ್ಟ್ ನಲ್ಲಿ ಕೆಲಸಕ್ಕೆ ಮರಳಿದ್ದಾರೆ. 79 ವರ್ಷದ ಮೊಯ್ಲಿ, ವಕೀಲರಾಗಿ, ಶಾಸಕರಾಗಿ, ಸಿಎಂ ಆಗಿ ಸಂಸದ ಮತ್ತು ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ,
ಇತ್ತೀಚಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಮೊಯ್ಲಿ ತಮ್ಮ ಪ್ರೀತಿ ಪಾತ್ರ ವೃತ್ತಿಗೆ ವಾಪಾಸಾಗಿದ್ದಾರೆ, ತಮ್ಮ ಕಕ್ಷಿದಾರರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಲಿದ್ದಾರೆ.
ತಮ್ಮ ನಾಮಫಲಕ ಬದಲಿಸಿರುವ ಮೊಯ್ಲಿ,ಶೀಘ್ರವೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳಲ್ಲಿ ವೃತ್ತಿ ಮುಂದುವರಿಸಲಿದ್ದಾರೆ.ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ  ಬೆಳಗ್ಗೆ 10 ಗಂಟೆಯಿಂದ ಹಿರಿಯ ಮತ್ತು ಕಿರಿಯ ವಕೀಲರೊಂದಿಗೆ ಇರಲಿದ್ದಾರೆ,
ಬಿಎ ಎಲ್ ಎಲ್ ಬಿ ಪದವಿ ಪಡೆದಿರುವ ಮೋಯ್ಲಿ ಕಾನೂನಿಗೆ ಹೊಸಬರಲ್ಲ, ಸಂಸದರಾಗಿ ಹಾಗೂ ಕೇಂದ್ರ ಸಚಿವರಾಗಿದ್ದ ಕಾರಣದಿಂದಾಗಿ ವಕೀಲಿಕೆಯಿಂದಾಗಿ ದೂರ ಉಳಿದಿದ್ದರು. 
ತಾವು ಕಾರ್ಕಳದಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ವೇಳೆಯ ಲಾ ಪ್ರಾಕ್ಟಸ್ ಮಾಡುತ್ತಿದ್ದಾಗಿ ಹೇಳಿದ್ದಾರೆ, ಆ ನಂತರ ಸಚಿವನಾದ ಮೇಲೆ ಸಮಯದ ಅಭಾವದಿಂದಾಗಿ ಹಾಗೂ ವಿವಿಧ ರಾಜಕೀಯ ಹುದ್ದೆಗಳನ್ನು ಅಲಂಕರಿಸಿದ ಕಾರಣ ವಕೀಲಿಕೆಯಿಂದ ದೂರ ಉಳಿಯಬೇಕಾಯಿತು ಎಂದು ಹೇಳಿದ್ದಾರೆ.
ಬಾಲ್ಯದಿಂದಲೂ ನನಗೆ ವಕೀಲನಾಗಬೇಕೆಂದು ತುಂಬಾ ಆಸೆಯಿತ್ತು.ಮತ್ತೆ ಕೋರ್ಟ್ ಗೆ ಹೋಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ. ಬೆಳಗ್ಗೆ 5 ಗಂಟೆಗೆ ಏಳುವ ಮೊಯ್ಲಿ, ಪ್ರತಿದಿನ ಏನಾದರೊಂದು ಬರೆಯುತ್ತಾರೆ, ಪ್ರತಿ ಶನಿವಾರ ಚಿಕ್ಕಬಳ್ಳಾಪುರಕ್ಕೆ ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಹೇಳಿದ್ದಾರೆ. ಮೊಯ್ಲಿ ಅವರು ಹಲವು ಪುಸ್ತಕ ಬರೆದಿರುವ ಮೊಯ್ಲಿ ತಮ್ಮ ಆತ್ಮಕಥೆ ಬರೆಯುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT