ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿದೇಶಕ್ಕೆ ಹೋಗಬೇಕಾಗಿತ್ತು. ಬರಗಾಲದಲ್ಲಿ ವಿದೇಶಕ್ಕೆ ಹೋದರೆ ಜನ ಬೈಯುತ್ತಾರೆ. ಹೀಗಾಗಿ ಜನರ ಗಮನ ಬೇರೆ ಕಡೆ ಸೆಳೆಯಲು ಗ್ರಾಮವಾಸ್ತವ್ಯದ ನಾಟಕ ಮಾಡಿ ಹೋದರು ಎಂದು ಮಾಜಿ ಡಿಸಿಎಂ ಆರ್, ಅಶೋಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅಶೋಕ್, ಅವರ ಗ್ರಾಮವಾಸ್ತವ್ಯಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿರುವ ಅವರು ಈಗ ಸಮಯ ಮಾತ್ರ ಸೂಕ್ತವಾಗಿಲ್ಲ, ವಿದೇಶದಲ್ಲಿ ಕಾಲಭೈರವೇಶ್ವರ ದೇಗುಲಕ್ಕೆ ಶಿಲಾನ್ಯಾಸ ಕಾರ್ಯಕ್ರಮಕ್ಕೆಂದು ಸಿಎಂ ಕುಮಾರಸ್ವಾಮಿ ಅಮೆರಿಕಾಕ್ಕೆ ತೆರಳಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ..
ಮೋದಿಗೆ ಓಟ್ ಕೊಟ್ಟು ಕೆಲಸ ನಮ್ಮನ್ನು ಕೇಳುತ್ತೀರಾ ಎಂಬ ಸಿಎಂ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯಗೆ ಅಶೋಕ್ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ನಿದ್ರೆ ಮಾಡುವವರಿಗೆ ಓಟ್ ಮಾಡಬೇಡಿ ಎಂದಿದ್ದಾರೆ. ಆದರೆ ಹೋದ ಕಡೆಯಲ್ಲ ನಿದ್ರೆ ಮಾಡುವವರು ಯಾರ ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿಯವರೇ ನೀವು ನಿಮ್ಮ ಅಪ್ಪನ ಮನೆಯಿಂದ ದುಡ್ಡು ತಂದು ಕೆಲಸ ಮಾಡಿ ಎಂದು ನಾವೇನು ಕೇಳೋದಿಲ್ಲ. ನಾವು ಕಟ್ಟಿರುವ ಟ್ಯಾಕ್ಸ್ ಹಣ ಇದೆಯಲ್ಲಾ ಅದರಲ್ಲಿ ಕೆಲಸ ಮಾಡಿ. ನಿಮಗೆ ಮಾನ ಮರ್ಯಾದೆ ಇದ್ರೆ ಈ ರೀತಿ ಮಾತನಾಡೋದು ಬಿಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜೆಡಿಎಸ್ ಸಹವಾಸ ಹೆಂಡತಿ ಮಕ್ಕಳ ಉಪವಾಸ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದರೂ ಕೇಳದೆ ಅವರು ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.