ರಾಜಕೀಯ

ನಾನು ಮೊದಲಿನ ಹಾಗೇ ಈಗ ಮಾತನಾಡಲು ಆಗುವುದಿಲ್ಲ-ಮಾಜಿ ಸಿಎಂ ಸಿದ್ದರಾಮಯ್ಯ

Sumana Upadhyaya
ವಿಜಯಪುರ: ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸುದ್ದಿಯಾಗುತ್ತಲೇ ಇರುತ್ತಾರೆ.
ಇತ್ತಿಚೆಗೆ ಯಾಕೋ ತಾವು ಮಾತನಾಡುವುದರಲ್ಲಿ ನಿರಾಸಕ್ತಿ ತೋರುತ್ತಿದ್ದಿರಿ ಎಂಬ ಮಾಧ್ಯಮದವರು ಪ್ರಶ್ನಿಸಿದಾಗ, ಮಾಜಿ ಸಿಎಂ, ಆಗ ಸರಕಾರ ನಡೆಸುತ್ತಿದ್ದವನು ನಾನು ಅದಕ್ಕೆ ಮಾತನಾಡುತ್ತಿದ್ದೆ. ಈಗ ನಾನು ಕೇವಲ ಸಮನ್ವಯ ಸಮಿತಿ ಅಧ್ಯಕ್ಷ. ಈಗ ಅಷ್ಟು ಮಾತನಾಡಲು ಸಾಧ್ಯವಿಲ್ಲ ಎಂದರು.
ವಿಜಯಪುರದ ಅಲಮಟ್ಟಿಯಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈಗ ಅಷ್ಟು ಮಾತನಾಡಲು ಸಾಧ್ಯವಿಲ್ಲ. ಎಲ್ಲವನ್ನು ಅಧಿಕೃತವಾಗಿ ಹೇಳೋದಕ್ಕೆ ಆಗುತ್ತಾ ಎಂದು ಬೇಸರದಿಂದ ನುಡಿದರು.
ಘೋಷಣೆಯಾದ ಹೊಸ ತಾಲೂಕುಗಳ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಕ್ಷೇತ್ರದಲ್ಲಿ ಗುಳೇದಗುಡ್ಡ ತಾಲೂಕು ಘೋಷಣೆ ಆಗಿದೆ. ಆದರೆ, ಬರೀ ಯಾವ್ದೊ ಒಬ್ಬ ತಹಶೀಲ್ದಾರ್ ಮಾತ್ರ ನೇಮಕ ಮಾಡಿದ್ದಾರಷ್ಟೇ, ಅದು ಇನ್ ಚಾರ್ಜ್. ಇತರೆ ಸಿಬ್ಬಂದಿ, ಕಚೇರಿಗಳನ್ನ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು ಎಂದು ತಿಳಿದುಬಂದಿದೆ.
SCROLL FOR NEXT