ರಾಜಕೀಯ

ಸಹೋದರನ ಗೆಲುವಿನ ಖುಷಿ ಕೂಡ ನನಗಿಲ್ಲ, ಇಂತಹ ಆಘಾತಕಾರಿ ಸೋಲು ನಿರೀಕ್ಷಿಸಿರಲಿಲ್ಲ: ಡಿಕೆ ಶಿವಕುಮಾರ್

Srinivasamurthy VN
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಸೋಲು ನಿಜಕ್ಕೂ ಆಘಾತ ಮೂಡಿಸಿದೆ. ಸಹೋದರನ ಗೆಲುವಿನ ಖುಷಿ ಕೂಡ ನನಗಿಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚುನಾವಣೆ ಬೆನ್ನಲ್ಲೇ ಆಸ್ಟ್ರೇಲಿಯಾ ಪ್ರವಾಸಕ್ಕೆ ಹಾರಿದ್ದ ಡಿಕೆ ಶಿವಕುಮಾರ್ ಫಲಿತಾಂಶ ಪ್ರಕಟಣೆ ಬಳಿಕ ತವರಿಗೆ ವಾಪಸಾಗಿದ್ದು, ಬಳಿಕ ಇದೇ ಮೊದಲ ಬಾರಿಗೆ ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.  ರಾಜ್ಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ​ ಕೇವಲ ಒಂದೇ ಒಂದು ಸ್ಥಾನ ಗೆಲ್ಲಲು ಮಾತ್ರ ಸಾಧ್ಯವಾಗಿದ್ದು, ಖರ್ಗೆ, ದೇವೇಗೌಡರಂತಹ ಹಿರಿಯ ನಾಯಕರೇ ಸೋಲು ಕಂಡಿರುವುದು ತಮಗೆ ಆಘಾತವನ್ನುಂಟು ಮಾಡಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
'ನಾನು ಮಹಾತ್ಮ ಗಾಂಧಿಜಿ ಅವರ ಮೂರು ಕೋತಿಗಳಂತೆ ಬಾಯಿಗೆ ಬೀಗ, ಕಿವಿಗೆ ಹತ್ತಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ. ನನಗೆಲ್ಲಾ ಗೊತ್ತಾಗಿದೆ. ನನಗೆಲ್ಲಾ ಮಾಹಿತಿ ಸಿಕ್ಕಿದೆ. ರಾಜ್ಯದ ಮತ್ತು ಮಂಡ್ಯದ ಚುನಾವಣಾ ಫಲಿತಾಂಶದ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಆದರೆ ಪಕ್ಷಜದ ಈ ರೀತಿಯ ಸೋಲು ನಿಜಕ್ಕೂ ಆಘಾತವನ್ನುಂಟು ಮಾಡಿದೆ. ಪಕ್ಷದ ಸೋಲಿಗೆ ಸಭೆ ಸೇರಿ ಚರ್ಚೆ ನಡೆಸುತ್ತೇವೆ. ಈಗಷ್ಟೇ ಆಸಿಸ್ ಪ್ರವಾಸದಿಂದ ನಾನು ಮರಳಿದ್ದು, ಶೀಘ್ರ ಪಕ್ಷದ ನಾಯಕರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಗಾಂಧಿ ಕುಟುಂಬ ಪಕ್ಷವನ್ನು ಸದಾ ಕಾಲ ಯಾವುದೇ ಬಿಕ್ಕಟ್ಟುಗಳಿಂದ ರಕ್ಷಿಸುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಮುಕ್ತ ಅಸಾಧ್ಯ ಎಂದೂ ಡಿಕೆಶಿ ಹೇಳಿದರು.
SCROLL FOR NEXT