ಸಿದ್ದರಾಮಯ್ಯ 
ರಾಜಕೀಯ

ಬಿಎಸ್ ವೈಗೆ ಕೆಟ್ಟ ಹೆಸರು ತಂದು, ರಾಜೀನಾಮೆ ಪಡೆಯಲು ಆಡಿಯೋ ಲೀಕ್ - ಸಿದ್ದರಾಮಯ್ಯ

ಬಿಎಸ್ ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ಬಂದು ,ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆಯುವ ಹಿನ್ನೆಲೆಯಲ್ಲಿ ಆಡಿಯೋ ಲೀಕ್ ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಾಗರ: ಬಿಎಸ್ ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ಬಂದು ,ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆಯುವ ಹಿನ್ನೆಲೆಯಲ್ಲಿ ಬಿಜೆಪಿಯವರೇ ಆಡಿಯೋ ಲೀಕ್ ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಹಿರಿಯ ನಾಯಕರಷ್ಟೇ ಇರುವ ಬಿಜೆಪಿಯ ಕೋರ್ ಕಮಿಟಿಯಲ್ಲಿ ಯಡಿಯೂರಪ್ಪ ಅವರಿಗೆ ಆಗದವರು ಇದ್ದಾರೆ ಅವರಿಂದಲೇ ಈ ಆಡಿಯೋ ಲೀಕ್ ಆಗಿರಬಹುದು ಎಂದಿದ್ದಾರೆ.

ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅವರಿಂದ ಬೇರೇನು ನಿರೀಕ್ಷೆ ಮಾಡಲು ಸಾಧ್ಯ, ಇನ್ನಷ್ಟು ಜೆಡಿಎಸ್ ಶಾಸಕರು ಬಿಜೆಪಿ ಸೇರಬಹುದೆಂಬ ಭಯಕ್ಕೆ ಅವರು ಹಾಗೆ ಮಾತನಾಡಿರಬಹುದು. ಇದು ನಿರೀಕ್ಷಿತ ರಾಜಕೀಯ ಬೆಳವಣಿಗೆ ಎಂದಿದ್ದಾರೆ.

ನೋಟು ರದ್ಧತಿ, ಅವೈಜ್ಞಾನಿಕ ಹಾಗೂ ಅಸಮರ್ಪಕ ಜಿಎಸ್ ಟಿ ಜಾರಿ ಮತ್ತು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯ , ದೇಶದ ಆರ್ಥಿಕ ಹಿಂಜರಿತಕ್ಕೆ ಕಾರಣಗಳು. ಹಸಿನ ಪ್ರಮಾಣ ಹೆಚ್ಚಿರುವ 118 ದೇಶಗಳ ಪಟ್ಟಿಯಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಇದು ದೇಶದ ಪಾಲಿನ ಕರಾಳ ದಿನಗಳು ಭಾರತ್ ಮೇ ಸಬ್ ಅಚ್ಚಾ ಹೇ ಎಂದರೆ ಇದಾ? ಎಂದು ಅವರು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಲೂಚಿಸ್ತಾನದಲ್ಲಿ ಉಗ್ರರ ವಿರುದ್ಧ ಭಾರಿ ಕಾರ್ಯಾಚರಣೆ: 145 ಭಯೋತ್ಪಾದಕರ ಹತ್ಯೆಗೈದಿದ್ದೇವೆಂದ ಪಾಕಿಸ್ತಾನ, ಭಾರತ-ಆಫ್ಘನ್ ವಿರುದ್ಧ ಗಂಭೀರ ಆರೋಪ

ಅಂಡಮಾನ್-ನಿಕೋಬಾರ್ ದ್ವೀಪ, ಕಾಶ್ಮೀರದಲ್ಲಿ ಅವಳಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲು

ಬೆಂಗಳೂರು: ಬನ್ನೇರುಘಟ್ಟದಲ್ಲಿ ಸಿನಿಮಾ ಶೈಲಿಯಲ್ಲಿ ದರೋಡೆ; ಯುವಕನಿಗೆ ಲಾಂಗ್ ತೋರಿಸಿ ಬೆದರಿಕೆ, 31 ಲಕ್ಷ ರೂ. ಲೂಟಿ..! Video

ಹೋಳಿ ನಂತರ ನಿತೀಶ್ ಕುಮಾರ್ ಪುತ್ರ ನಿಶಾಂತ್ ರಾಜಕೀಯ ಪ್ರವೇಶ? ಬಂಗಾಳ ಚುನಾವಣೆಗೆ ಬಿಜೆಪಿ ಸಿದ್ಧತೆ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಸಾವು ಪ್ರಕರಣ: SIT ತನಿಖೆ ಆರಂಭ

SCROLL FOR NEXT