ರಾಜಕೀಯ

ಗೋಕಾಕ್ ಉಪಚುನಾವಣೆ: ರಮೇಶ್ ಜಾರಕಿಹೊಳಿ ಸೋಲಿಸಲು ಕಾಂಗ್ರೆಸ್-ಜೆಡಿಎಸ್ ರಣತಂತ್ರ

Shilpa D

ಗೋಕಾಕ್: ಸಮ್ಮಿಶ್ರ ಸರ್ಕಾರ ಕೆಡವಲು ಪ್ರಮುಖ ಪಾತ್ರ ವಹಿಸಿದ್ದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಸೋಲಿಸಲು ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಪಣ ತೊಟ್ಟಿವ. ಹೀಗಾಗಿ ಗೋಕಾಕ್ ವಿಧಾನಸಭೆ ಉಪ ಚುನಾವಣೆ ಹೈವೋಲ್ಟೇಜ್ ಕದನವಾಗಿದೆ.

ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಗಳು ತಮ್ಮ ಪ್ರಚಾರ ಕಾರ್ಯ ಆರಂಭಿಸಿವೆ, ಗೋಕಾಕ್ ನಲ್ಲಿ ಸೋಮವಾರ ನಡೆದ ಪ್ರತ್ಯೇಕ ರ್ಯಾಲಿಯಲ್ಲಿ  ಸಾವಿರಾರು ಮಂದಿ ಭಾಗವಹಿಸಿದ್ದರು,

ಜೆಡಿಎಸ್ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ರಮೇಶ್ ಜಾರಕಿಹೊಳಿ ವಿರುದ್ಧ ಹರಿಹಾಯ್ದರು. ರಮೇಶ್ ಜಾರಕಿಹೊಳಿ ದುರಹಂಕಾರಕ್ಕೆ  ತಿಲಾಂಜಲಿ ಹಾಡುವ ಕಾಲ ಕೂಡಿ ಬಂದಿದೆ ಎಂದು ಕಿಡಿಕಾರಿದರು,

ಅತೃಪ್ತ ಬಿಜೆಪಿ ನಾಯಕ ಅಶೋಕ್ ಪೂಜಾರಿ ಅವರನ್ನು ಪಕ್ಷಕ್ಕೆ ಕರೆತರಲು ಕುಮಾರ ಸ್ವಾಮಿ ಯಶಸ್ವಿಯಾಗಿದ್ದಾರೆ, ಇನ್ನೂ ಬಿಜೆಪಿ ನಾಯಕ ಸುರೇಶ್ ಅಂಗಡಿ ಮತ್ತು ರಮೇಶ್ ಜಾರಕಿಹೊಳಿ  ಅಶೋಕ್ ಪೂಜಾರಿ ಅವರನ್ನು ಭೇಟಿ ಮಾಡಿ ಮನವೊಲಿಸಲು ಮಾಡಿದ ಪ್ರಯತ್ನ ವಿಫಲವಾಯಿತು,  ಇದೇ ಸಮಯವನ್ನು ಬಳಸಿಕೊಂಡ ಕುಮಾರಸ್ವಾಮಿ  ಪೂಜಾರಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದರು,.  ಗೋಕಾಕ್ ನಲ್ಲಿ ರುವ ಸುಮಾರು 1 ಲಕ್ಷ ಲಿಂಗಾಯತ ಮತಗಳನ್ನು ವಿಭಜಿಸಲು ಅಶೋಕ್ ಪೂಜಾರಿ ಅವರನ್ನು ಎಚ್ ಡಿ ಕೆ ದಾಳವನ್ನಾಗಿಸಿಕೊಳ್ಳಲು ಮುಂದಾಗಿದ್ದಾರೆ.

ಇನ್ನು ಕಾಂಗ್ರೆಸ್ ಕೂಡ ಹಿಂದೆ ಉಳಿದಿಲ್ಲ, ಶೀಘ್ರೇವ್ ಮಾಜಿ ಸಿಎಂ ಸಿದ್ದರಾಮಯ್ಯ ಗೋಕಾಕ್ ನಲ್ಲಿ ಬೃಹತ್ ರ್ಯಾಲಿ ಆಯೋಜಿಸಲಿದ್ದಾರೆ.  ಕಾಂಗ್ರೆಸ್ ನಿಂದ ರಮೇಶ್ ಜಾರಕಿಹೊಳಿ ಹೊರಹೋಗಿರುವುದು ಲಖನ್ ಜಾರಕಿಹೊಳಿ ಮತ್ತು ಅಶೋಕ್ ಪೂಜಾರಿಗೆ ವರವಾಗಲಿದೆ. ಈ ಇಬ್ಬರು ಅಧಿಕ ಪ್ರಮಾಣದ ಮತಗಳನ್ನು ವಿಭಜಿಸುವಲ್ಲ ಯಶಸ್ವಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಯಮನಕರಡಿ ಶಾಸಕ ಸತೀಶ್ ಜಾರಕಿಹೊಳಿ ಗೋಕಾಕ್ ಉಸ್ತುವಾರಿ ವಹಿಸಿಕೊಂಡಿದ್ದಾರೆ,. ಸತೀಶ್ ಜಾರಕಿಹೊಳಿ ಹಿಂದುಳಿದ ವರ್ಗಗಳ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ, ಗೋಕಾಕ್ ಭಾಗದಲ್ಲಿ ಮುಸ್ಲಿಮರು ಮತ್ತು ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಉಪ ಚುನಾವಣೆಯಲ್ಲಿ ರಮೇಶ್ ಅವರನ್ನು ಸೋಲಿಸಲು ಕಾರ್ಯತಂತ್ರ ರೂಪಿಸುತ್ತಿವೆ.

SCROLL FOR NEXT