ರಾಜಕೀಯ

ಮಂಡ್ಯದಲ್ಲಿ ಗೃಹ ಸಚಿವರಿಂದಲೇ ನೀತಿಸಂಹಿತೆ ಉಲ್ಲಂಘನೆ, ತಪಾಸಣೆಗೆ ಕಾರು ನಿಲ್ಲಿಸದ ಬೊಮ್ಮಾಯಿ

Lingaraj Badiger

ಮಂಡ್ಯ: ಗೃಹಸಚಿವ ಬಸವರಾಜ ಬೊಮ್ಮಾಯಿ ಅವರೇ ನೀತಿ ಸಂಹಿತೆ ಉಲ್ಲಂಘಿಸಿದ ಘಟನೆ ಬುಧವಾರ ಮಂಡ್ಯದಲ್ಲಿಂದು ನಡೆದಿದೆ.

ಇಂದು ಬೆಳಿಗ್ಗೆ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಗೃಹ ಸಚಿವರು ಚುನಾವಣಾ ಸಿಬ್ಬಂದಿ ತಪಾಸಣೆಗೆ ಕಾರ್ ನಿಲ್ಲಿಸುವಂತೆ ಕೈತೋರಿದರೂ ನಿಲ್ಲಿಸದೆ ತೆರಳಿದರು.

ಒಂದಲ್ಲ ಎರಡು ಕಡೆ ಹೋಂ ಮಿನಿಸ್ಟರ್ ನೀತಿ ಸಂಹಿತೆ ಉಲ್ಲಂಘಿಸಿದರು. ಮಂಡ್ಯ ಜಿಲ್ಲೆಯ ಗಡಿಭಾಗದ ನಿಡಘಟ್ಟ, & ಮಂಡ್ಯ ತಾಲೂಕಿನ ಹನಕೆರೆ ಬಳಿ ಗೃಹಸಚಿವರಿಂದಲೇ ನೀತಿಸಂಹಿತೆ ಉಲ್ಲಂಘಿಸಿದ ಘಟನೆ ನಡೆಯಿತು. 

ಬೆಂಗಳೂರಿಂದ ಮೈಸೂರಿನತ್ತ ತೆರಳುತ್ತಿದ್ದ ಗೃಹ ಸಚಿವರು, ನಿಡಘಟ್ಟ ಬಳಿ ವಾಹನ ನಿಲ್ಲಿಸದ ಹಿನ್ನೆಲೆಯಲ್ಲಿ 
ಹನಕೆರೆ ಬಳಿ ವಾಹನ ತಪಾಸಣೆಗೆ ಚೆಕ್ ಪೋಸ್ಟ್ ಸಿಬ್ಬಂದಿ ಸಿದ್ಧವಾಗಿದ್ದರು. ಆದರೆ ಇಲ್ಲೂ ವಾಹನ ನಿಲ್ಲಿಸದೆ ಸಚಿವರ ಉದ್ಧಟತನ ಪ್ರದರ್ಶನಮಾಡಿದರು.

ನೀತಿ ಸಂಹಿತೆಯ ಪಾಠ ಹೇಳುವ ಗೃಹ ಮಂತ್ರಿಯೇ ಈ ರೀತಿ ನಡೆದುಕೊಂಡಿರುವುದು ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶವ್ಯಕ್ತವಾಗಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಉಪಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿ, ಸಚಿವರು, ಹಾಗೂ ಅನುಮಾನಾಸ್ಪದ ವಾಹನಗಳನ್ನು ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಆದರೆ ಇಂದು ಗೃಹ ಸಚಿವ ಬಸವರಾಜು ಬೊಮ್ಮಾಯಿ ಅವರೇ ನೀತಿ ಸಂಹಿತೆ ಉಲ್ಲಂಘಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ..
- ನಾಗಯ್ಯ 

SCROLL FOR NEXT