ಡಿವಿ ಸದಾನಂದಗೌಡ 
ರಾಜಕೀಯ

ಇನ್ನು ಆರು ತಿಂಗಳಲ್ಲಿ ಶಿವಸೇನೆ ನಿರ್ನಾಮ: ಸದಾನಂದಗೌಡ

ಮಹಾರಾಷ್ಟ್ರದಲ್ಲಿ ನೂತನವಾಗಿ ರಚನೆಯಾಗಿರುವ ದೇವೇಂದ್ರ ಫಡ್ನವೀಸ್ ಅವರ ಸರ್ಕಾರಕ್ಕೆ ಶಿವಸೇನೆಯಿಂದ ಯಾವುದೇ ರೀತಿಯ ಬೆದರಿಕೆಯಿಲ್ಲ ಎಂದು ಕೇಂದ್ರ ಸಚಿವ  ಡಿವಿ ಸದಾನಂದಗೌಡ ಹೇಳಿದ್ದಾರೆ.

ಬೆಂಗಳೂರು: ಮಹಾರಾಷ್ಟ್ರದಲ್ಲಿ ನೂತನವಾಗಿ ರಚನೆಯಾಗಿರುವ ದೇವೇಂದ್ರ ಫಡ್ನವೀಸ್ ಅವರ ಸರ್ಕಾರಕ್ಕೆ ಶಿವಸೇನೆಯಿಂದ ಯಾವುದೇ ರೀತಿಯ ಬೆದರಿಕೆಯಿಲ್ಲ ಎಂದು ಕೇಂದ್ರ ಸಚಿವ  ಡಿವಿ ಸದಾನಂದಗೌಡ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದಗೌಡ ಮಹಾರಾಷ್ಟ್ರದಲ್ಲಿ ಮೈತ್ರಿ ಇಲ್ಲದೆ ಸ್ವತಂತ್ರ ಸ್ಪರ್ಧೆ ಮಾಡಿದ್ದರೇ ಮೂರನೇ ಎರಡರಷ್ಟು ಸ್ಪಷ್ಟ ಬಹುಮತ ಪಡೆದುಕೊಳ್ಳುತ್ತಿತ್ತು, ಆದರೆ ಹಾಗಾಲಿಲ್ಲ, ನೋಡುತ್ತಿರಿ ಇನ್ನು ಆರು ತಿಂಗಳಲ್ಲಿ, ಶಿವಸೇನೆ ನಿರ್ನಾಮವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಮಹಾರಾಷ್ಟ್ರದಲ್ಲಿ ಎನ್​​​ಸಿಪಿ ಉತ್ತಮ ಆಡಳಿತದ ಹಿನ್ನೆಲೆಯಲ್ಲಿ ಬಿಜೆಪಿ ಜೊತೆಗೆ ಬಂದಿದೆ. ಇದನ್ನ ದೇವೇಗೌಡರು ಕೂಡ ಮನಗಾಣಬೇಕಿದೆ. ಉಪ ಚುನಾವಣೆಯಲ್ಲಿ ನಾವು 15ಕ್ಕೆ 15 ಸೀಟುಗಳಲ್ಲಿ ಗೆಲವು ಸಾಧಿಸಲಿದೆ. ಕಳೆದ 30 ವರ್ಷಗಳಿಂದ ಶಿವಸೇನೆ ನಮ್ಮೊಂದಿಗೆ ಇತ್ತು. ಆದರೆ ಶಿವಸೇನೆಗೆ ತಕ್ಷಣ ಅಧಿಕಾರದ ವ್ಯಾಮೋಹ ಬಂತು. ಹಿಂದುತ್ವ ಅನ್ನುತ್ತಿದ್ದ ಶಿವಸೇನೆ ಅದರಿಂದ ಹಿಂದಕ್ಕೆ ಸರಿಯಿತು ಎಂದರು.

ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಅವರು ಕಾಂಗ್ರೆಸ್ ಗಿಂತ ಬಿಜೆಪಿ ಉತ್ತಮ ಅಂತಾ ಹೇಳಿದ್ದಾರೆ. ಈಗ ಎರಡು ದಿನಗಳಿಂದ ಅವರಲ್ಲಿ ಬದಲಾವಣೆ ಆಗಿದೆ. ಈಗಾಗಲೇ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಚುನಾವಣೆ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಕಂಗಾಲಾಗಿದ್ದಾರೆ ಎಂದರು.

ಕೆ ಆರ್ ನಗರ, ಹೊಸಕೋಟೆ ಮುಂತಾದ ಕ್ಷೇತ್ರಗಳನ್ನ ಸೂಕ್ಷ್ಮ ಅಂತಾ ಚುನಾವಣಾ ಆಯೋಗ ಘೋಷಣೆ ಮಾಡಬೇಕು. ಅಂತಹ ಕ್ಷೇತ್ರಗಳ ಬಗ್ಗೆ ಆಯೋಗ ವಿಶೇಷ ಗಮನ ಕೊಡಬೇಕು ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹೇಳಿದರು. ಈಗ ಅಭಿವೃದ್ಧಿ ಅಂದರೆ ಬಿಜೆಪಿ ಅಂತಾ ಅಲ್ಲಿನ ಜನರಿಗೆ ಬಂದಿದೆ. ಹಿಂದೆಯೂ ಕೂಡ ಶಿವಸೇನೆ ನಮಗೆ ತೊಂದರೆ ಕೊಟ್ಟಿತ್ತು. ಅದನ್ನೆಲ್ಲ ನಾವು ಸಹಿಸಿಕೊಂಡು ಬಂದಿದ್ದೇವೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ