ಸದಾನಂದಗೌಡ 
ರಾಜಕೀಯ

' ಸತ್ತವರ ಮನೆಯಲ್ಲೂ ಸದಾನಂದ ಗೌಡ ನಗುತ್ತಾರೆ : ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ರು ಸೋಮಣ್ಣ'

ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಸತ್ತವರ ಮನೆಗೆ ಹೋದರೂ ಹೀ ಅಂತ ನಗುತ್ತಾ ಇರುತ್ತಾರೆ. ಅದಕ್ಕೆ ಸತ್ತವರ ಮನೆಗೆ ಅವರನ್ನು ಕರೆದುಕೊಂಡು ಹೋಗಬೇಡಿ ಎಂದು ನಾನೇ ಹೇಳಿದ್ದೇನೆ.

ಬೆಂಗಳೂರು:  ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಸತ್ತವರ ಮನೆಗೆ ಹೋದರೂ ಹೀ ಅಂತ ನಗುತ್ತಾ ಇರುತ್ತಾರೆ. ಅದಕ್ಕೆ ಸತ್ತವರ ಮನೆಗೆ ಅವರನ್ನು ಕರೆದುಕೊಂಡು ಹೋಗಬೇಡಿ ಎಂದು ನಾನೇ ಹೇಳಿದ್ದೇನೆ ಎಂದು ಕುಮಾರಸ್ವಾಮಿ ಅಪಹಾಸ್ಯ ಮಾಡಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡುತ್ತಿದ್ದ ಅವರು, ಸದಾನಂದ ಗೌಡರು ಸತ್ತವರ ಮನೆಗೆ ಹೋಗಿ ,ಸತ್ತಿದ್ದಾರಾ ಅಂತ ನಗ್ತಾನೇ ಕೇಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ದೇವೇಗೌಡರು, ನಾನು ಇಲ್ಲದೇ ಇದ್ದಿದ್ದರೆ ಈ ಕ್ಷೇತ್ರದ ಅಭ್ಯರ್ಥಿ ಯಾವತ್ತೋ ಎನ್​ಕೌಂಟರ್ ಆಗಿಬಿಡುತ್ತಿದ್ದರು. ಪೊಲೀಸರಿಂದ ಮಾತ್ರ ಅಲ್ಲ, ರೌಡಿಗಳಿಂದಲೂ ಇವರ ಎನ್​ಕೌಂಟರ್ ಆಗತ್ತಾ ಇತ್ತು. ಇವರು ಬದಲಾಗುತ್ತಾರೆ ಎಂದು 2013ರಲ್ಲಿ ಒಂದು ಅವಕಾಶ ಕೊಟ್ಟೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕಣ್ಣೀರು ಹಾಕೋದು ನಮ್ಮ ಕುಟುಂಬದ ಪೇಟೆಂಟ್. ನಾವು ಬಡ ಕುಟುಂಬದಿಂದ ಬಂದವರು. ಬಿಜೆಪಿಯವರ ಹಾಗೆ ಚಿನ್ನದ ಚಮಚ ಇಟ್ಟುಕೊಂಡು ಬೆಳೆದಿಲ್ಲ. ಬಡವರನ್ನು ನೋಡಿದಾಗ ನಮಗೆ ಕಣ್ಣೀರು ಬರುತ್ತದೆ. ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಹಾಗಾಗಿ ಅವರಿಗೆ ಕಣ್ಣೀರು ಬರಲ್ಲ  ಎಂದು ಕುಮಾರಸ್ವಾಮಿ ತಮ್ಮ ಕಣ್ಣೀರಿಗೆ ವಿಶ್ಲೇಷಣೆ ನೀಡಿದರು.

ಸೋಮಣ್ಣ ಯಾರ ಯಾರ ಕಾಲಿಗೆ ಯಾವ್ಯಾವಾಗೆಲ್ಲಾ ಬಿದ್ದಿದ್ದಾರೆ ಎನ್ನೋದು ಗೊತ್ತಿದೆ. ನಿಮಗೆ ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಜನತಾ ಬಜಾರ್​ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡವರು ಸೋಮಣ್ಣ. ಈ ವಯಸ್ಸಿನಲ್ಲಿ ದೇವೇಗೌಡರು ಪಕ್ಷಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ನಿಮ್ಮ ಹಾಗೆ ಪಕ್ಷದಲ್ಲಿ ಬೆಳೆದು ಆ ಮೆಲೆ ಆ ಪಕ್ಷಕ್ಕೆ ದ್ರೋಹ ಮಾಡಿಲ್ಲ” ಎಂದು ಸೋಮಣ್ಣರನ್ನು ಹೆಚ್​ಡಿಕೆ ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

Asian Games 2026: ಭಾರತದ 'ಚಿನ್ನದ' ಬೇಟೆ; ಶೂಟಿಂಗ್ ನಲ್ಲಿ ಸುರುಚಿ ಸಿಂಗ್-ಕಮಲ್ಜೀತ್ ಚಿನ್ನ; ಬೆಳ್ಳಿಗೆ ಮುತ್ತಿಟ್ಟ ಗುಲ್ವೀರ್ ಸಿಂಗ್!

ಕರ್ನಾಟಕಕ್ಕೆ ನೀಡಬೇಕಿದ್ದ 2,186 ಕೋಟಿ ರೂ. ಅನುದಾನಕ್ಕೆ ಕೇಂದ್ರ ಸರ್ಕಾರ ತಡೆ: ಸಚಿವ ಈಶ್ವರ್ ಖಂಡ್ರೆ

'ಚುನಾವಣೆಯಲ್ಲಿ ಅಕ್ರಮ ನಡೆದರೆ ಸ್ಪರ್ಧಿಸಬೇಡಿ, ಚುನಾವಣೆಯನ್ನೇ ಬಹಿಷ್ಕರಿಸಿ:': ಪ್ರತಿಪಕ್ಷಗಳಿಗೆ CJPಯ ಅಭಿಜೀತ್ ದೀಪ್ಕೆ ಆಗ್ರಹ

ನಿರಂತರ ಮಳೆಗೆ ಸಿಕ್ಕಿಂ ತತ್ತರ: ರಿಂಬಿ ಗ್ರಾಮದಲ್ಲಿ ಭಾರೀ ಭೂಕುಸಿತ, 30ಕ್ಕೂ ಹೆಚ್ಚು ಮನೆಗಳು ಹಾನಿ, ಸಿಎಂ ತಮಂಗ್ ಹೇಳಿದ್ದೇನು? Video